More

    ಪ್ರಸ್ತುತ ಕಾಲಮಾನಕ್ಕೆ ಪ್ರೊ.ಎಂಡಿಎನ್ ವಿಚಾರಧಾರೆ ಅಗತ್ಯ

    ಮದ್ದೂರು: ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ರೈತ ಚಳವಳಿ ಆಧರಿಸಿದ ಡೈರೆಕ್ಟ್ ಆ್ಯಕ್ಷನ್ ನಾಟಕದ ಪೋಸ್ಟರ್ ಬಿಡುಗಡೆ ಹಾಗೂ ಪ್ರಚಾರ ಕಾರ್ಯಕ್ರಮಕ್ಕೆ ಗುಳೂರು ಗ್ರಾಮದ ಗದ್ದೆಯಲ್ಲಿ ನಡೆಯುತ್ತಿದ್ದ ರಾಗಿ ಕಟಾವಿನ ನಡುವೆ ನೈಸರ್ಗಿಕ ಕೃಷಿಕ ಗೂಳೂರು ಕೃಷ್ಣ ಬುಧವಾರ ಚಾಲನೆ ನೀಡಿದರು.


    ಬೀಜ ಸ್ವಾತಂತ್ರ್ಯದ ಬಗ್ಗೆ ವಿಶ್ವ ವಾಣಿಜ್ಯ ಒಪ್ಪಂದದ ವೇಳೆ ಎಚ್ಚರಿಸಿ ಜಾಗೃತಿ ಮೂಡಿಸಿದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ವಿಚಾರಧಾರೆ ಪ್ರಸ್ತುತ ಕಾಲಮಾನಕ್ಕೆ ಹೆಚ್ಚು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


    ಈ ವಿಷಯದ ಮಹತ್ವ ಕುರಿತು ಫೆ.11 ರಂದು ಸಂಜೆ 6 ಗಂಟೆಗೆ ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಮೆಚ್ಚುಗೆ ವಿಷಯವಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.


    ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ಮಾತನಾಡಿ, ಬೆಂಗಳೂರಿನ ಹೆಸರಾಂತ ನಗ್ನ ಥಿಯೇಟರ್ ತಂಡದ ಸದಸ್ಯರು ನಾಟಕದಲ್ಲಿ ಅಭಿನಯಿಸಲಿದ್ದು, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪಾತ್ರದಲ್ಲಿ ಸಂಪತ್ ಮೈತ್ರೇಯಾ ಅಭಿನಯಿಸಲಿದ್ದಾರೆ. ನಟರಾಜ ಹುಳಿಯಾರ್ ನಾಟಕದ ಕಥೆ ಬರೆದಿದ್ದು, ಕಬಡ್ಡಿ ನರೇಂದ್ರಬಾಬು ನಾಟಕ ನಿರ್ದೇಶಿಸಿದ್ದಾರೆ. ರೈತ ಚಳವಳಿ ಕುರಿತ ಸಾಹಸಗಾಥೆ ಡೈರಕ್ಟ್ ಆ್ಯಕ್ಷನ್ ನಾಟಕಕ್ಕೆ ಜನರು ಸ್ವ ಪ್ರೇರಣೆಯಿಂದ ಭಾಗವಹಿಸಿ ರೈತ ಚಳವಳಿಯ ಅಗತ್ಯತೆ ಕುರಿತು ಪ್ರೇರಣೆ ಹೊಂದಬೇಕು ಎಂದು ಹೇಳಿದರು.


    ಬಿದರಕೋಟೆ, ಕೊಪ್ಪ, ಕೀಳಘಟ್ಟ, ಬೆಸಗರಹಳ್ಳಿ, ಬೆಸಗರಹಳ್ಳಿ ಗೇಟ್ ಸೇರಿದಂತೆ ಮದ್ದೂರು ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಯಿತು. ರೈತ ಮುಖಂಡರಾದ ರಮೇಶ್, ಮೋಹನ್, ಬಿ.ಜೆ.ರಮೇಶ್, ಬಿ.ಎಲ್.ಪುಟ್ಟಲಿಂಗೇಗೌಡ, ದಿನೇಶ್ ಬಾಬು, ನಾಥಪ್ಪ, ಲೋಕೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts