More

    ರೈತ ಜಾಗೃತಿ ಕಾರ್ಯಾಗಾರದ ನಿರ್ಣಯಗಳು

    ಕೂಡಲಸಂಗಮ: ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಕೂಡಲಸಂಗಮದಲ್ಲಿ ನಡೆದ ಎರಡು ದಿನದ ರಾಜ್ಯಮಟ್ಟದ ರೈತ ಜಾಗೃತಿ ಕಾರ್ಯಾಗಾರ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ನಿರ್ಣಯಗಳನ್ನು ಘೋಷಿಸಿದರು.

    ಪ್ರಸಕ್ತ ಸಾಲಿನ ಎ್ಆರ್‌ಪಿ ಕಬ್ಬು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನಿಗದಿಯಾಗಿಲ್ಲ. ಆದ್ದರಿಂದ ಎ್ಆರ್‌ಪಿ ಪ್ರತಿ ಟನ್‌ಗೆ ಕನಿಷ್ಠ 4ಸಾವಿರ ರೂ.ಗೆ ಏರಿಕೆ ಮಾಡಬೇಕು. ರೈತರ ಕಬ್ಬಿನ ಬಾಕಿ, ಕಳೆದ ವರ್ಷದ ಎ್ಆರ್‌ಪಿಗಿಂತ ಕಡಿಮೆ ಬೆಳೆ ನೀಡಿದ್ದು, ಹೆಚ್ಚುವರಿಯಾಗಿ ಟನ್ ಕಬ್ಬಿಗೆ 150 ರೂ. ಕೂಡಲೇ ಕಾರ್ಖಾನೆಗಳಿಂದ ಕೊಡಿಸಬೇಕು. ರೈತರ ಬಾಕಿ ಪಾವತಿಸುವವರೆಗೆ ಕಾರ್ಖಾನೆಗಳಿಗೆ ಕಬ್ಬು ನುರಿಸಲು ಅನುಮತಿ ನೀಡಬಾರದು. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದಿಂದಲೇ ಎಪಿಎಂಸಿ ಅಥವಾ ಎ್ಪಿಒಗಳ ಮೂಲಕ ತೂಕದ ಯಂತ್ರ ಸ್ಥಾಪಿಸಿ ಮೋಸ ತಪ್ಪಿಸಬೇಕು. ಕಬ್ಬಿಗೆ ಸಲ್ ಬಿಮಾ ಬೆಳೆ ವಿಮಾ ಯೋಜನೆ ಜಾರಿಗೆ ತರಬೇಕು. ಅತಿವೃಷ್ಟಿ, ಅನಾವೃಷ್ಟಿ, ಬೆಂಕಿಗಾಹುತಿಯಾದ ಕಬ್ಬಿಗೆ ಸೂಕ್ತ ಪರಿಹಾರ ಸಿಗುವಂತಾಗಬೇಕು. ಕಬ್ಬಿನಿಂದ ರೈತರು ಆಲೆಮನೆಗಳಲ್ಲಿ ಇಥೆನಾಲ್ ಉತ್ಪಾದಿಸಿ ಬಳಸಿಕೊಳ್ಳಲು ಸರ್ಕಾರ ತಂತ್ರಜ್ಞಾ ಅಭಿವೃದ್ಧಿಪಡಿಸಬೇಕು. ಕಬ್ಬಿಗೆ ಆಕಸ್ಮಿಕ ಬೆಂಕಿ ಬಿದ್ದು, ಭಸ್ಮಗೊಂಡರೆ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಎಫ್‌ಆರ್‌ಪಿ ದರದಲ್ಲಿ ಶೇ.25 ರಷ್ಟು ಕಾನೂನು ಬಾಹಿರವಾಗಿ ಹಣ ಕಡಿತ ಮಾಡುತ್ತಿರುವುದನ್ನು ತಪ್ಪಿಸಬೇಕು. ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ನಡುವೆ ಸರ್ಕಾರ ಜಾರಿಗೊಳಿಸಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಕಡ್ಡಾಯವಾಗಿ ಜಾರಿಗೊಳಿಸಿ ಒಪ್ಪಂದ ಪತ್ರದ ಪ್ರತಿಯನ್ನು ರೈತರಿಗೂ ನೀಡುವಂತಾಗಬೇಕು. ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳ, ಸಿರಿಧಾನ್ಯಗಳನ್ನು ನೇರವಾಗಿ ಖರೀದಿಸಿ ಪಡಿತರ ವಿತರಣೆಗೆ ಬಳಸಿಕೊಳ್ಳಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡ ಕೈಬಿಡಬೇಕು. ಕೃಷಿ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ.80 ರಷ್ಟು ಸಾಲ ಕೊಡುವ ನೀತಿ ಜಾರಿಯಾಗಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 10 ಗಂಟೆ ನಿರಂತರ ವಿದ್ಯುತ್ ನೀಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಉಳಿಯಬೇಕು, ಗೋವು ರಕ್ಷಣಾತ್ಮಕ ಕಾನೂನು ತಿದ್ದುಪಡಿ ಆಗಬೇಕೆನ್ನುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಉಪಾಧ್ಯಕ್ಷ ಸುರೇಶ ಪಾಟೀಲ, ಎನ್.ಎಚ್. ದೇವಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts