More

    ಜೀವನ ಶೈಲಿ ಬದಲಾವಣೆಯಿಂದ ಸಮಸ್ಯೆ

    ಕಾರ್ಗಲ್: ಪ್ರಸ್ತುತ ಬದಲಾದ ಜೀವನ ಶೈಲಿಯಿಂದಾಗಿ ವಿದ್ಯಾರ್ಥಿಗಳಲ್ಲಿ ಆಲಸ್ಯ ಹಾಗೂ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾಗ ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ಪರಿಸರ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾನ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಇಂದಿನ ಯುವ ಪೀಳಿಗೆಯ ಜೀವನ ಪದ್ಧತಿ ಬದಲಾಗಿ ಹೋಗಿದೆ. ಅವರು ತಿನ್ನುವ ಆಹಾರ ಹಾಗೂ ಸಮಯ ಇದು ಬೆಳವಣಿಗೆ ಮತ್ತು ವಿಕಾಸಕ್ಕೆ ಮಾರಕವಾಗಿದೆ ಎಂದರು.
    ಹಿಂದಿನ ಕಾಲದಲ್ಲಿ ಜೀವನ ಪದ್ಧತಿ ವೈಜ್ಞಾನಿಕವಾಗಿ ಆರೋಗ್ಯ ಅಭಿವೃದ್ಧಿ ಹಾಗೂ ಬುದ್ಧಿ ವಿಕಾಸಕ್ಕೆ ಪೂರಕವಾಗಿ ಬೆಳಗ್ಗೆ ಬೇಗ ಎದ್ದು ಶಕ್ತಿಯುತ ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿತ್ತು, ಹಾಗೆಯೇ ವಿದ್ಯಾರ್ಜನೆಗೆ ಹೆಚ್ಚಿನ ವಿದ್ಯಾರ್ಥಿಗಳು ಬ್ರಾಹ್ಮಿ ಕಾಲದಲ್ಲಿ ಓದಿದಾಗ ಗ್ರಹಣಶಕ್ತಿ ಲಭಿಸುತ್ತಿತ್ತು. ರಾತ್ರಿ ಹೆಚ್ಚು ಕಾಲ ಕಷ್ಟಪಡುವ ಸನ್ನಿವೇಶವಿರಲಿಲ್ಲ. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಸೂರ್ಯೋದಕ್ಕೆ ಮುಂಚೆ ಏಳುವ ಪರಿಪಾಠ ಕಡಿಮೆಯಾಗಿದೆ. ಹೆಚ್ಚಾಗಿ ಜಂಕ್‌ಪುಡ್ ಮತ್ತು ಕರಿದ ಪದಾರ್ಥ ಸೇವನೆಯಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿರುವುದು ಕಂಡು ಬಂದಿದೆ. ಹಾಗಾಗಿ ಬಾಲ್ಯದಲ್ಲೇ ವಿದ್ಯಾರ್ಥಿಗಳಲ್ಲಿ ಇಂದು ಕ್ಯಾನ್ಸರ್, ಅಲ್ಸರ್, ಸಕ್ಕರೆ ಕಾಯಿಲೆ ಮತ್ತು ಬಿಪಿಯಂತಹ ಮಾರಕ ಕಾಯಿಲೆಗಳು ಕಂಡುಬರುತ್ತಿರುವುದು ಜೀವನ ಶೈಲಿಯ ಅಪಾಯದ ಮಟ್ಟವನ್ನು ಸೂಚಿಸುತ್ತದೆ ಎಂದು ತಿಳಿಸಿದರು.
    ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ರಸಪ್ರಶ್ನೆಯ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮುಖ್ಯಶಿಕ್ಷಕಿ ಭಾರತಿ ಹೆಗಡೆ, ಶಿಕ್ಷಕರಾದ ಪ್ರತಿಮಾ, ಎಂ.ಮೀನಾಕ್ಷಿ, ಶಾಯಿಸ್ತಾ ಕೋಟೆಬಾಗಿಲು, ಚಂದ್ರಕಲಾ, ದಾಕ್ಷಾಯಿಣಿ, ಪವನ್, ಶ್ವೇತಾ ಇದ್ದರು. ಶಿಕ್ಷಕ ಬಿ.ಕೆ.ರಾಘವೇಂದ್ರ ಸ್ವಾಗತಿಸಿದರು. ಎನ್.ಸತ್ಯನಾರಾಯಣ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts