More

    ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನಲ್ಲಿ ಕನ್ನಡಿಗರಿಗೆ ಬೇಡಿಕೆ

    ಮುಂಬೈ: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯ 3ನೇ ಹಾಗೂ ಅಂತಿಮ ದಿನ ಅರ್ಜುನ್ ದೇಸ್ವಾಲ್ ದುಬಾರಿ ಆಟಗಾರ ಎನಿಸಿದರು. ಅವರು 96 ಲಕ್ಷ ರೂ.ಗೆ ಜೈಪುರ ಪಿಂಕ್‌ಪ್ಯಾಂಥರ್ಸ್‌ ಪಾಲಾದರು. ಒಟ್ಟಾರೆಯಾಗಿ ಅವರು ಟೂರ್ನಿಯ 8ನೇ ಆವೃತ್ತಿಯ 3ನೇ ದುಬಾರಿ ಆಟಗಾರ ಎನಿಸಿದರು. ಹರಾಜಿನ 2ನೇ ದಿನ ಪ್ರದೀಪ್ ನರ್ವಾಲ್ ದಾಖಲೆಯ 1.65 ಕೋಟಿ ರೂ.ಗೆ ಯುಪಿ ಯೋಧಾ ಮತ್ತು ಸಿದ್ಧಾರ್ಥ್ ದೇಸಾಯಿ 1.30 ಕೋಟಿ ರೂ.ಗೆ ತೆಲುಗು ಟೈಟಾನ್ಸ್ ಸೇರಿದ್ದರು.

    ನಿತಿನ್ ತೋಮರ್ 61 ಲಕ್ಷ ರೂ.ಗೆ ಪುಣೇರಿ ಪಲ್ಟಾನ್, ಸಂದೀಪ್ 59.50 ಲಕ್ಷ ರೂ.ಗೆ ತೆಲುಗು ಟೈಟಾನ್ಸ್, ಬ್ರಿಜೇಂದ್ರ ಸಿಂಗ್ ಚೌಧರಿ 55 ಲಕ್ಷ ರೂ.ಗೆ ಹರಿಯಾಣ ಸ್ಟೀಲರ್ಸ್‌, ಅಜಯ್ ಠಾಕೂರ್ 46 ಲಕ್ಷ ರೂ.ಗೆ ದಬಾಂಗ್ ದೆಹಲಿ, ಸೋಮ್‌ಬೀರ್ 34.50 ಲಕ್ಷ ರೂ.ಗೆ ಪುಣೇರಿ ಪಲ್ಟಾನ್, ರಿಂಕು 32 ಲಕ್ಷ ರೂ.ಗೆ ಯು ಮುಂಬಾ, ಅತುಲ್ ಎಂಎಸ್ 30 ಲಕ್ಷ ರೂ.ಗೆ ತಮಿಳ್ ತಲೈವಾಸ್‌ಗೆ ಸೇರ್ಪಡೆಯಾದರು. 2018ರಲ್ಲಿ ದಾಖಲೆಯ 1.51 ಕೋಟಿ ರೂ.ಗೆ ಮಾರಾಟವಾಗಿದ್ದ ಮೋನು ಗೋಯತ್ ಈ ಬಾರಿ ಮೂಲಬೆಲೆ 20 ಲಕ್ಷ ರೂ. ಗೆ ಪಟನಾ ಪೈರೇಟ್ಸ್ ಸೇರಿದರು.
    ಬೆಂಗಳೂರು ಬುಲ್ಸ್ ಅಂತಿಮ ದಿನದ ಖರೀದಿ: ದೀಪಕ್ ನರ್ವಾಲ್ (26.50 ಲಕ್ಷ ರೂ), ಜಿಬಿ ಮೋರೆ (25 ಲಕ್ಷ ರೂ), ಮಯೂರ್ ಜಗನ್ನಾಥ ಕದಂ (15 ಲಕ್ಷ ರೂ.), ವಿಕಾಸ್, ಅಂಕಿತ್ (ತಲಾ 10 ಲಕ್ಷ ರೂ).

    ಕನ್ನಡಿಗರಲ್ಲಿ ಜೀವ, ಸುಖೇಶ್ ದುಬಾರಿ
    ಸೋಮವಾರ ಇಬ್ಬರು ಕನ್ನಡಿಗರಷ್ಟೇ ಬಿಕರಿಯಾಗಿದ್ದರೆ, ಮಂಗಳವಾರ 7 ಕನ್ನಡಿಗರು ವಿವಿಧ ತಂಡಗಳ ಪಾಲಾದರು. ಜೀವಕುಮಾರ್ ಗರಿಷ್ಠ 44 ಲಕ್ಷ ರೂ.ಗೆ ದಬಾಂಗ್ ದೆಹಲಿ ಸೇರಿದರೆ, ಸುಖೇಶ್ ಹೆಗ್ಡೆ 30 ಲಕ್ಷ ರೂ.ಗೆ ಬೆಂಗಾಲ್ ವಾರಿಯರ್ಸ್‌ ಪಾಲಾದರು. ರತನ್ 25 ಲಕ್ಷ ರೂ.ಗೆ ಗುಜರಾತ್ ಸೂಪರ್‌ಜೈಂಟ್ಸ್ ತಂಡ ಕೂಡಿಕೊಂಡರು. ಸಚಿನ್ ವಿಟ್ಟಲ 17.50 ಲಕ್ಷ ರೂ, ಮನೋಜ್ ಗೌಡ 10 ಲಕ್ಷ ರೂ. ಮತ್ತು ದರ್ಶನ್ ಜೆ 10 ಲಕ್ಷ ರೂ.ಗೆ ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಮಾರಾಟವಾದರು. ವಿಶ್ವಾಸ್ 10 ಲಕ್ಷ ರೂ.ಗೆ ಪುಣೇರಿ ಪಲ್ಟಾನ್ ಸೇರಿದರು. ಕರ್ನಾಟಕ ಮೂಲದ ಮುಂಬೈ ಆಟಗಾರ ರಿಷಾಂಕ್ ದೇವಾಡಿಗ 20 ಲಕ್ಷ ರೂ.ಗೆ ಬೆಂಗಾಲ್ ವಾರಿಯರ್ಸ್‌ ಸೇರಿದರು.

    ಧರ್ಮರಾಜ್ ದಾಖಲೆ
    ಅನುಭವಿ ಡಿೆಂಡರ್ ಧರ್ಮರಾಜ್ ಚೆರಲತನ್ 20 ಲಕ್ಷ ರೂ.ಗೆ ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡಕ್ಕೆ ಸೇರ್ಪಡೆಗೊಂಡರು. ಈ ಮೂಲಕ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಗರಿಷ್ಠ 7 ತಂಡಗಳಲ್ಲಿ ಆಡಿದ ಮೊದಲ ಆಟಗಾರ ಎನಿಸಿದರು. 46 ವರ್ಷದ ಧರ್ಮರಾಜ್ ಈ ಮುನ್ನ ಬೆಂಗಳೂರು ಬುಲ್ಸ್, ತೆಲುಗು ಟೈಟಾನ್ಸ್, ಪಟನಾ ಪೈರೇಟ್ಸ್, ಪುಣೇರಿ ಪಲ್ಟಾನ್, ಯು ಮುಂಬಾ ಮತ್ತು ಹರಿಯಾಣ ಸ್ಟೀಲರ್ಸ್‌ ಪರ ಆಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts