More

    ಪ್ರೊ ಕಬಡ್ಡಿ ಲೀಗ್​: ಹಾಲಿ ಚಾಂಪಿಯನ್ ಡೆಲ್ಲಿ ಗೆಲ್ಲಿಸಿದ ನಾಯಕ ನವೀನ್

    ಬೆಂಗಳೂರು: ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್​ 2022 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 41-27 ಅಂಕಗಳಿಂದ ಮಣಿಸುವ ಮೂಲಕ ಭರ್ಜರಿ ಆರಂಭ ಕಂಡಿತು.

    ರೈಡಿಂಗ್​ನಲ್ಲಿ ಮಿಂಚಿದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಕಲೆಹಾಕಿ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಮೊದಲಾರ್ಧದಲ್ಲೇ 19-10ರಿಂದ ಮುನ್ನಡೆ ಸಾಧಿಸಿ ಬೀಗಿದ ಡೆಲ್ಲಿ ತಂಡ, ದ್ವಿತೀಯಾರ್ಧದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ತಂಡದ ಪ್ರತಿರೋಧದ ನಡುವೆಯೂ ಮೇಲುಗೈ ಉಳಿಸಿಕೊಂಡಿತು.

    ನವೀನ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ 43ನೇ ಬಾರಿ ಸೂಪರ್-10 ಅಂಕ ಗಳಿಸಿದ ಸಾಧನೆ ಮಾಡಿದರು. ಆಶು ಮಲಿಕ್ (7) ರೈಡಿಂಗ್​ನಲ್ಲಿ ನಾಯಕನಿಗೆ ಉತ್ತಮ ಬೆಂಬಲ ಒದಗಿಸಿದರೆ, ಟ್ಯಾಕಲಿಂಗ್​ನಲ್ಲಿ ವಿಶಾಲ್ (4), ಕ್ರಿಷನ್ (4) ಮತ್ತು ಸಂದೀಪ್ ಧುಲ್ (4) ಗಮನಸೆಳೆದರು. ಮುಂಬಾ ಪರ ಆಶಿಶ್ (7) ಪ್ರತಿರೋಧ ತೋರಿದರು.

    ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ಶುಭಾರಂಭ, ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ದಿಟ್ಟ ಜಯಭೇರಿ

    ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಬಗ್ಗೆ ಕಾಲಿವುಡ್​ನಲ್ಲಿ ಹರಿದಾಡುತ್ತಿದೆ ಹೊಸ ವದಂತಿ! ​

    ಮೀಸಲು ಪ್ರಮಾಣ ಹೆಚ್ಚಳದ ತಳಮಳ: ಶೇ.50 ಮೀಸಲಾತಿ ಗಡಿ ಮೀರುವ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts