More

    ಪ್ರಿಯಾಂಕ ಗಾಂಧಿ ಗಾಡಿಗೆ ಮತ್ತೆ ಬ್ರೇಕ್​! ಆಗ್ರಾಗೆ ಹೋಗದಂತೆ ತಡೆದ ಯುಪಿ ಪೊಲೀಸರು

    ಲಖನೌ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶ ಪೊಲೀಸರು ಮತ್ತೆ ತಡೆದಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದ ಲಖೀಂಪುರ್​ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಸ್ಥಳಕ್ಕೆ ಹೋಗದಂತೆ ಅವರನ್ನು ತಡೆಯಲಾಗಿತ್ತು. ಈ ಬಾರಿ ಪೊಲೀಸ್​​ ಕಸ್ಟಡಿಯಲ್ಲಿದ್ದಾಗ ಸಾವಪ್ಪಿರುವ ವ್ಯಕ್ತಿಯ ಕುಟುಂಬವನ್ನು ಮಾತನಾಡಿಸಲು ಹೊರಟಿದ್ದಾಗ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಕಾಂಗ್ರೆಸ್​ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಮಂಗಳವಾರ ರಾತ್ರಿ ಉತ್ತರಪ್ರದೇಶದ ಆಗ್ರಾದಲ್ಲಿ ಜಗದೀಶ್​ಪುರ ಪೊಲೀಸ್​ ಠಾಣೆಯ ಸ್ಟೋರ್​ ರೂಂನಿಂದ 25 ಲಕ್ಷ ರೂಪಾಯಿ ಕದ್ದಿರುವ ಆರೋಪದ ಮೇಲೆ ಬಂಧಿಸಲಾಗಿದ್ದ ಅರುಣ್​ ವಾಲ್ಮೀಕಿ ಎಂಬ ಉದ್ಯೋಗಿ ಸಾವಪ್ಪಿದ್ದಾನೆ. ಪೊಲೀಸರು ಅವನ ಮನೆಯಲ್ಲಿ ಶೋಧ ನಡೆಸುವ ಸಂದರ್ಭದಲ್ಲಿ ಅವನ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ತಲುಪುವ ಮುನ್ನ ಸಾವಪ್ಪಿದನೆಂದು ಪೊಲೀಸರ ಹೇಳಿಕೆ ತಿಳಿಸಿದೆ.

    ಇದನ್ನೂ ಓದಿ: ಎಂದೂ ಮುಗಿಯದ ಕತೆಯಾಗಬಾರದು! ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ

    ವಿರೋಧ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಆತನ ಕುಟುಂಬಸ್ಥರನ್ನು ಭೇಟಿಯಾಗಲು ಇಂದು ಹೊರಟಿದ್ದರು. ಈ ಸಂದರ್ಭ ಲಖನೌ-ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಅವರ ಕಾನ್ವಾಯ್​ಅನ್ನು ಪೊಲೀಸರು ತಡೆದಿದ್ದಾರೆ ಎನ್ನಲಾಗಿದೆ. ಆಗ್ರಾದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದು, ಜಿಲ್ಲಾ ಮ್ಯಾಜಿಸ್ಟ್ರೇಟರು ಯಾವುದೇ ರಾಜಕೀಯ ವ್ಯಕ್ತಿಗೆ ಪ್ರವೇಶ ನೀಡಬಾರದೆಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ಕುಪಿತಗೊಂಡಿರುವ ಪ್ರಿಯಾಂಕ, “ಯುಪಿ ಸರ್ಕಾರ ಏತಕ್ಕಾಗಿ ಹೆದರುತ್ತಿದೆ” ಎಂದು ಪ್ರಶ್ನಿಸಿದ್ದಾರೆ. “ನಾನು ಮನೆಯಲ್ಲಿದ್ದರೆ ಅವರಿಗೆ ತೊಂದರೆಯಿಲ್ಲ, ಕಛೇರಿಗೆ ಹೋದರೆ ತೊಂದರೆಯಿಲ್ಲ. ನಾನು ಬೇರೆಲ್ಲಾದರೂ ಹೋದರೆ, ಅವರು ಈ ‘ತಮಾಷಾ’ ಶುರುಮಾಡಿಬಿಡುತ್ತಾರೆ” ಎಂದು ಟೀಕಿಸಿರುವ ಅವರು, “ಸ್ವತಂತ್ರವಾಗಿ ಓಡಾಡಲು ನನಗೆ ಹಕ್ಕಿದೆ” ಎಂದಿದ್ದಾರೆ. (ಏಜೆನ್ಸೀಸ್)

    ಎಷ್ಟೇ ಶಕ್ತಿಶಾಲಿಯಾದರೂ, ವಂಚಕರನ್ನು ಸರ್ಕಾರ ಬಿಡುವುದಿಲ್ಲ: ಪ್ರಧಾನಿ ಮೋದಿ

    ಪಾರಿವಾಳ ಬಳಸಿ ಡುಪ್ಲೆಕ್ಸ್ ಮನೆ ದೋಚುತ್ತಿದ್ದ ಚಾಲಾಕಿ ಕಳ್ಳ ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts