More

    ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ನೆರವು ಘೋಷಿಸಿ

    ಹುಕ್ಕೇರಿ: ಶೈಕ್ಷಣಿಕ ವಲಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಆದರೆ, ಇದೀಗ ಲಾಕ್‌ಡೌನ್‌ನಿಂದ ಆ ವಲಯ ತೀವ್ರ ಸಂಕಷ್ಟ ಎದುರಿಸುತ್ತಿವೆ. ಸರ್ಕಾರ ಶಿಕ್ಷಣ ಸಂಸ್ಥೆಗಳ ನೆರವಿಗೆ ಬರಬೇಕು ಎಂದು ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯ ಚೇರ್ಮನ್ ಮಹಾವೀರ ನಿಲಜಗಿ ಒತ್ತಾಯಿಸಿದರು.

    ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಎಲ್ಲ ರಂಗಗಳ ಸಮಸ್ಯೆಗೆ ಸ್ಪಂದಿಸುತ್ತಿದೆ. ಆದರೆ, ನಾಡಿಗೆ ವಿದ್ಯಾವಂತರನ್ನು ಕೊಡುಗೆ ನೀಡುತ್ತಿರುವ ವಲಯವನ್ನು ಸರ್ಕಾರ ಕಡೆಗಣಿಸಿರುವುದು ವಿಷಾದನೀಯ ಎಂದರು.

    ಹುಕ್ಕೇರಿಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶೋಕ ಪಾಟೀಲ, ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಬಸವೇಶ ಪಟ್ಟಣಶೆಟ್ಟಿ, ಬೆಳವಿಯ ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆ ಚೇರ್ಮನ್ ಅಪ್ಪಾಸಾಹೇಬ ಸಾರಾಪುರೆ, ಸಂಕೇಶ್ವರದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಹೇಶ ದೇಸಾಯಿ ಅವರು ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಯವರು ಮಕ್ಕಳಿಂದ ಶುಲ್ಕ ಪಡೆಯಬಾರದು, ಶಿಕ್ಷಕರಿಗೆ ವೇತನ ಕಡಿತಗೊಳಿಸದೆ ಸಮರ್ಪಕ ವೇತನ ನೀಡಬೇಕು ಎಂದು ಆದೇಶಿಸಿದ್ದಾರೆ. ಆದರೆ, ವಸೂಲಿಯಾದ ಶುಲ್ಕದಲ್ಲಿ ವೇತನ, ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು. ಮಕ್ಕಳನ್ನು ಕರೆ ತರಲು ವಾಹನ ಸೌಕರ್ಯ ಒದಗಿಸಬೇಕು. ಇದಕ್ಕೆಲ್ಲ ತಗುಲುವ ವೆಚ್ಚ ಭರಿಸಲು ಖಾಸಗಿಯವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಸಭೆಯಲ್ಲಿ ಚರ್ಚಿಸಿದ ಬಳಿಕ ವಾಹನ ಸಾಲದ ಕಂತು, ತೆರಿಗೆ ವಿನಾಯಿತಿ, ಪ್ರಸಕ್ತ ವರ್ಷ ಶಿಕ್ಷಕರ ವೇತನ ಮತ್ತು ಮಕ್ಕಳ ಶುಲ್ಕ ಸರ್ಕಾರವೇ ಭರಿಸಬೇಕು. ಸಂಸ್ಥೆಗಳ ಮೇಲೆ ಹೆಚ್ಚಿನ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಸಿದ್ಧಲಿಂಗ ಹಿರೇಮಠ, ಮುಕುಂದ ಹಿರೇಮಠ, ಮಾರ್ತಾಂಡ ಕುಲಕರ್ಣಿ, ಕಲ್ಲಪ್ಪ ನಡುಗೇರಿ, ಆನಂದ ಕಾಮೇರಿ, ಶಿವಕುಮಾರ ಹಿರೇಕೋಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts