More

    ಖಾಸಗಿ ಶಿಕ್ಷಣದಿಂದ ಸರ್ಕಾರದ ಹೋರೆ ಕಡಿಮೆ

    ಮಸ್ಕಿ: ರಾಜ್ಯದ ಅರ್ಧದಷ್ಟು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯೆಯನ್ನು ಪಡೆಯುತ್ತಿದ್ದಾರೆ ಈ ಮೂಲಕ ಸರ್ಕಾರದ ಹೊರೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕಡಿಮೆ ಮಾಡಿವೆ ಎಂದು ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

    ಇದನ್ನೂ ಓದಿ: ಸರ್ಕಾರ ಅತಿಥಿ ಉಪನ್ಯಾಸಕರ ಪರವಾಗಿದೆ:ಸಚಿವ ಶಿವರಾಜ ತಂಗಡಗಿ

    ಪಟ್ಟಣದ ಕವಿತಾಳ ರಸ್ತೆಯಲ್ಲಿರುವ ಮಸ್ಕಿ ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಗುರುವಾರ ನಡೆದ ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

    ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಮಸ್ಯೆಗಳನ್ನು ಏದುರಿಸುತ್ತಿದ್ದು ಸರ್ಕಾರ ನೆರವಿಗೆ ಬರಬೇಕಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶಿಕ್ಷಣ ಸಚಿವರುಗಳಾದ ಡಿ.ಸುಧಾಕರ, ಮಧು ಬಂಗಾರಪ್ಪರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಒಕ್ಕೂಟದಿಂದ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

    ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ವಕೀಲರು, ಥಾಮಸ್ ರಾಯಚೂರು, ಚಂದ್ರಶೇಖರ ಬಲ್ಲಟಗಿ, ಚನ್ನಪ್ಪ ಗಬ್ಬೂರು, ವಿನಾಯಕ ಪಾಟೀಲ ಸಿಂಧನೂರು, ಟಿ.ಬಸವರಾಜ, ಆರ್.ಸಿ.ಪಾಟೀಲ,

    ಶಿವರಾಜ ಇತ್ಲಿ, ಲಕ್ಷ್ಮೀನಾರಯಣ ಶಟ್ಟಿ, ಕೆ.ವಿ.ರಡ್ಡಿ, ಮಂಜುನಾಥ ಸ್ವಾಮಿ ತೋರಣದಿನ್ನಿ, ದಯಾನಂದ ಜೋಗಿನ್, ಎನ್.ಶಿವಕುಮಾರ, ಪಾರ್ಶ್ವನಾಥ ಕೊಲ್ಹಾರ, ಸೋಮಶೇಖರ ಸಜ್ಜನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts