More

    ಕೆಎಲ್ಇ ಜೆಎನ್ಎಂಸಿಯಲ್ಲಿ ಮಹತ್ವದ ತರಬೇತಿ ಕೀರ್ತಿ ತಂದಿದೆ

    ಬೆಳಗಾವಿ : ಮಹಿಳೆಯರಲ್ಲಿ ಕಬ್ಬಿಣದ ಪೂರೈಕೆಯೊಂದಿಗೆ ಒಂದು ಡೋಸ್ ಐವಿ ಕಬ್ಬಿಣದ ದ್ರಾವಣವನ್ನು ಹೊಲಿಸುವ ಅಧ್ಯತೆಯ ಅಧ್ಯಯನದ ತರಬೇತಿ ಬೆಳಗಾವಿಯಲ್ಲಿ ನಡೆಸುತ್ತಿರುವುದು ಜೆಎನ್‌ಎಂಸಿಯ ಸಂಶೋಧನೆ ಘಟಕಕ್ಕೆ ಕೀರ್ತಿ ತಂದಿದೆ ಎಂದು ಕೆ.ಎಲ್.ಇ ಅಕಾಡೆಮಿಯ ಉಪಕುಲಪತಿ ಡಾ.ನಿತೀನ ಗಂಗಾನೆ ಹೇಳಿದರು.
     ನಗರದಲ್ಲಿನ ಕೆಎಲ್‌ಇ ವಿಶ್ವವಿದ್ಯಾಲಯದ ಜವಾಹಾರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದಲ್ಲಿ  ಮೇ 24 ರಿಂದ 27ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ‘ಮಹಿಳೆಯರಲ್ಲಿ ಕಬ್ಬಿಣದ ಕೊರತೆಯಿಂದ ರಕ್ತಹಿನತೆ ತಡೆಗಟ್ಟುವಿಕೆಯ ಪ್ರಾಧಾನ್ಯತೆ ಪ್ರಯೋಗ ಪ್ರಿಯೋರಿಟಿ ಟ್ರಾಯಲ್’ ಎಂಬ ಸಂಶೋಧನೆ ಅಧ್ಯಯನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

    ಕೆಎಲ್ಇ ಜೆಎನ್ಎಂಸಿಯಲ್ಲಿ ಮಹತ್ವದ ತರಬೇತಿ ಕೀರ್ತಿ ತಂದಿದೆ

    ಕೆ.ಎಲ್.ಇ ಜವಾಹಾರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಅನೇಕ ವೈದ್ಯಕೀಯ ಸಂಶೋಧನೆಗಳಿಂದ ವಿಶ್ವವಿಖ್ಯಾತಿ ಪಡೆದಿದ್ದು, ಇದೀಗ ಈ ಸಂಶೋಧನಾ ಅಧ್ಯಯನದ ಅನುಷ್ಠಾನಗೊಳ್ಳುವುದಕ್ಕೂ ಇಡೀ ಗ್ಲೋಬಲ್ ನೆಟವರ್ಕನ ಸಂಶೋಧನಾ ಕೇಂದ್ರಗಳಲ್ಲಿ ಕೆ.ಎಲ್.ಇ ಸಂಸ್ಥೆಯ ಜೆ.ಎನ್.ಎಂ.ಸಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ನೇತೃತ್ವಹಿಸಿರುವುದು ಸಂಶೋಧನೆ ಘಟಕಕ್ಕೆ ಕೀರ್ತಿ ತಂದಿದೆ ಎಂದರು.

    ಅಮೇರಿಕಾದ ಆರ್.ಟಿ.ಐ ಇಂಟರನ್ಯಾಶನಲ್ ಸಂಸ್ಥೆಯ ಸಂಶೋಧಕರಾದ ಡಾ.ಎಲಿಜಾಬೆತ್ ಮೆಕ್ಲೂರ್, ಡಾ.ಜೆನಿಫರ್ ಹೆಮಿಂಗವೆ-ಫೋಡೆ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು. ಜೆಎನ್‌ಎಂಸಿ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಸಂಶೋಧಕರಾದ ಡಾ ಎಂ.ಸಿ. ಮೆಟಗುಡ್ಡ, ಡಾ.ಎಂ.ಎಸ್.ಸೋಮಣ್ಣವರ, ಡಾ ಅವಿನಾಶ ಕವಿ, ಡಾ.ಉಮೇಶ ಚರಂತಿಮಠ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಸಂಶೋಧಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts