More

    ತತ್ವ ಸಿದ್ದಾಂತಗಳು ಸದಾ ಅನುಕರಣೀಯ

    ಬೀರೂರು: ಸರಳತೆ, ಅಹಿಂಸೆ ಮತ್ತು ಸತ್ಯಾನ್ವೇಷಣೆ ಹಾದಿಯಲ್ಲಿ ನಡೆದು ಜಗತ್ತಿಗೆ ಮಾದರಿ ವ್ಯಕ್ತಿತ್ವ ಹೊಂದಿದ್ದ ಮಹಾತ್ಮ ಗಾಂಧೀಜಿ ಹಾಗೂ ಅವರ ಆದರ್ಶದ ಅನುಯಾಯಿಯಾಗಿ ಸರಳವಾಗಿ ಜೀವಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಲಾಲ್ ಬಹದ್ದೂರ್ ಶಾಸಿ ಅವರ ತತ್ವ ಮತ್ತು ಸಿದ್ಧಾಂತಗಳು ಇಂದಿಗೂ ಅನುಕರಣೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಹೇಳಿದರು.
    ಪುರಸಭೆ ಕಚೇರಿಯಲ್ಲಿ ಸೋಮವಾರ ಗಾಂಧೀಜಿ ಮತ್ತು ಶಾಸೀ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಗಾಂಧೀಜಿ ದೇಶದ ಜನರಲ್ಲಿ ಸ್ವಾಭಿಮಾನದ ಕನಸು ಕಂಡವರು. ಬ್ರಿಟಿಷರ ದಾಸ್ಯದಿಂದ ಮುಕ್ತಿಗೆ ಒಗ್ಗಟ್ಟಿನ ಹೋರಾಟ, ಶಾಂತಿ ಮಂತ್ರವೇ ಮೂಲ ಎಂದು ನಂಬಿ ಅದರಂತೆ ಬದುಕಿ ರಾಷ್ಟ್ರಪಿತ ಎನಿಸಿಕೊಂಡವರು ಎಂದರು.
    ಲಾಲ್ ಬಹದ್ದೂರ್ ಶಾಸೀ ಅವರ ಬಳಿ ದೇಶದ ಚುಕ್ಕಾಣಿ ಇದ್ದರೂ ಸಾಮಾನ್ಯರಂತೆ ಬದುಕಿ ಇತರರಿಗೆ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡರು. ಬಲಿಷ್ಠ ಸೈನ್ಯ ಮತ್ತು ಸುರಕ್ಷಿತ ಕೃಷಿ ಅವರ ಕನಸಾಗಿತ್ತು. ಈ ಇಬ್ಬರೂ ಮಹಾತ್ಮರ ಜೀವನ ಭಾರತೀಯರ ಪಾಲಿಗೆ ಚಿರಸ್ಮರಣೀಯವಾಗಿರಬೇಕು ಎಂದು ನುಡಿದರು.
    ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್.ಮೋಹನ ಕುಮಾರ್, ಪುರಸಭೆ ಸದಸ್ಯರಾದ ಎನ್.ಎಂ.ನಾಗರಾಜ್, ಲೋಕೇಶಪ್ಪ, ಮಾನಿಕ್ ಬಾಷಾ, ಕೆ.ಆರ್.ರಘು, ಬಿ.ಎಂ.ರುದ್ರಪ್ಪ, ಸಂತೋಷ್‌ಕುಮಾರ್, ಶಿವಪ್ಪ, ವೆಂಕಟೇಶ್, ಪುರಸಭೆ ಅಧಿಕಾರಿಗಳಾದ ನೂರುದ್ದೀನ್, ಲಕ್ಷ್ಮಣ್, ಗಿರಿರಾಜ್, ಕರಿಯಪ್ಪ, ಶಿಲ್ಪಾ, ಸಿಬ್ಬಂದಿ ಸ್ವರೂಪ ರಾಣಿ, ರೇಣುಕಮ್ಮ , ಪ್ರಸಾದ್, ಲೋಕೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts