More

    ಸರ್ವಕಾಲಕ್ಕೂ ಮಾನ್ಯತೆ ಪಡೆದಿವೆ ವಚನಗಳು

    ಗಂಗಾವತಿ: ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಮಾರ್ಗದರ್ಶನ ನೀಡುತ್ತಿದ್ದು, ಮಹತ್ತರ ಚಿಂತನೆ ಹೊಂದಲು ಪೂರಕವಾಗಿದೆ ಎಂದು ಸಂಶೋಧಕ ಹಾಗೂ ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

    ನಗರದ ಶ್ರೀನಗರ ಬಡಾವಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್ ಸಂದರ್ಭದಲ್ಲೂ ವಚನ ಸಾಹಿತ್ಯ ಉದಾತ್ತ ಚಿಂತನೆಗಳನ್ನು ಹೆಚ್ಚಿಸಿದೆ. ಬದುಕು ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಬಗ್ಗೆ ಮತ್ತು ಉನ್ನತ ಜೀವನ ಸಾಗಿಸಲು ವಚನ ಸಾಹಿತ್ಯ ಸಹಕಾರಿಯಾಗಿದ್ದು, ಸರ್ವಕಾಲಕ್ಕೂ ಮಾನ್ಯತೆ ಪಡೆದಿವೆ ಎಂದರು.

    ಸಾಹಿತಿ ರುದ್ರಮ್ಮ ಹಾಸಿನಾಳ್ ರಚಿಸಿದ ವಚನ ಹೊಳಹು ಮತ್ತು ಬೆಳಗಿನೊಳಗೆ ಮಹಾಬೆಳಗು ಕೃತಿಯ ಕುರಿತು ಕಸಾಪ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿದರು. ಕೃತಿಗಳನ್ನು ಸಿರಗುಪ್ಪಾದ ಹಿರಿಯ ಚಿಂತಕಿ ಸರ್ವಮಂಗಳಾ ವಿರೂಪಾಕ್ಷಗೌಡ ಬಿಡುಗಡೆಗೊಳಿಸಿದರು.

    ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್, ಹಿರಿಯ ಚಿಂತಕ ಸಿ.ಎಚ್.ನಾರಿನಾಳ್, ಸಾಹಿತಿ ರುದ್ರಮ್ಮ ಹಾಸಿನಾಳ್, ಶಿಕ್ಷಕಿ ಉಮಾದೇವಿ ಕುಂಬಾರ್ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts