More

    ಭಾರತೀಯ ಪಾಪಡ್​, ಚಿಪ್ಪುಮೀನು ಖಾದ್ಯ ಮತ್ತು ಸಾರು ಬಡಿಸಿದ ಪ್ರಿನ್ಸ್​ ವಿಲಿಯಮ್ಸ್​

    ಲಂಡನ್​: ಇಂಗ್ಲೆಂಡ್​ ರಾಜಮನೆತನದವರ ಭಾರತೀಯ ಅಡುಗೆಗಳ ಮೇಲಿನ ಪ್ರೀತಿ ಇಂದು ನಿನ್ನೆಯದಲ್ಲ. ಭಾರತವನ್ನು ವಸಾಹತು ಮಾಡಿಕೊಂಡಿದ್ದಾಗಿನಿಂದಲೂ ಅವರು ಭಾರತೀಯ ಅಡುಗೆ, ಖಾದ್ಯಗಳನ್ನು ಆಸ್ವಾದಿಸುತ್ತಲೇ ಬಂದವರು. ಇದೀಗ ಪ್ರಿನ್ಸ್​ ವಿಲಿಯಮ್ಸ್​ ಈ ಪ್ರೀತಿಯನ್ನು ಮುಂದುವರಿಸಿದ್ದಾರೆ.

    ತಮ್ಮ ಕೆನ್ಸಿಂಗ್ಟನ್​ ಅರಮನೆಗೆ ಬಂದಿದ್ದ ಅತಿಥಿಗಳಿಗೆ ಭಾರತೀಯ ಖಾದ್ಯಗಳ ಆತಿಥ್ಯ ನೀಡಿ ಸಂಭ್ರಮಿಸಿದ್ದಾರೆ. ವಾರಾಂತ್ಯದಲ್ಲಿ ಬೆವರಿಳಿಸುವ ಫುಟ್​ಬಾಲ್​ ಪಂದ್ಯದ ಬಳಿಕ ಪ್ರಿನ್ಸ್​ ವಿಲಿಯಮ್ಸ್​ ಚಿಪ್ಪುಮೀನಿನ ಖಾದ್ಯದ ಜತೆಗೆ ಭಾರತೀಯ ಖಾದ್ಯಗಳನ್ನು ಆಸ್ವಾದಿಸುವ ಜತೆಗೆ ತಮ್ಮ ಅತಿಥಿಗಳಿಗೂ ಬಡಿಸುವುದನ್ನು ತುಂಬಾ ಹಿಂದಿನಿಂದಲೂ ರೂಢಿಸಿಕೊಂಡು ಬರುತ್ತಿದ್ದಾರೆ. ಬಿಬಿಸಿ5ಲೈವ್​ ಪಾಡ್​ಕಾಸ್ಟ್​ಗಾಗಿ ಇಂಗ್ಲೆಂಡ್​ನ ಮಾಜಿ ತಾರಾ ಫುಟ್​ಬಾಲ್​ ಆಟಗಾರ ಪೀಟರ್​ ಕ್ರೌಚ್​ ಅವರು ಪ್ರಿನ್ಸ್​ ವಿಲಿಯಮ್ಸ್​ ಅವರ ಸಂದರ್ಶನ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಅವರು ಹಾಗೂ ಅವರೊಂದಿಗೆ ಬಂದಿದ್ದ ಸಹೋದ್ಯೋಗಿಗಳಿಗೆ ಪ್ರಿನ್ಸ್​ ವಿಲಿಯಮ್ಸ್​ ಭಾರತೀಯ ಖಾದ್ಯಗಳನ್ನು ಉಣಬಡಿಸಿದ್ದಾರೆ.

    ಇದಕ್ಕೂ ಮುನ್ನ ಉಬರ್​ ಚಾಲಕ ಸಾಂಬಾರ್​ ಅನ್ನು ಕೆನ್ಸಿಂಗ್ಟನ್​ ಅರಮನೆಗೆ ತಂದಿದ್ದ. ಆದರೆ, ಆತನನ್ನು ಮುಖ್ಯದ್ವಾರದ ಬಳಿ ತಡೆದಿದ್ದ ರಕ್ಷಣಾ ಸಿಬ್ಬಂದಿ ಆತನಿಗೆ ಒಳ ಹೋಗಲು ಅವಕಾಶ ನಿರಾಕರಿಸಿದ್ದರು. ಆದರೆ, ಪ್ರಿನ್ಸ್​ ವಿಲಿಯಮ್ಸ್​ ಮಧ್ಯಪ್ರವೇಶಿಸಿದ ಬಳಿಕ ಆತನಿಗೆ ಭದ್ರತಾ ಸಿಬ್ಬಂದಿ ಆತನಿಗೆ ಸಾಂಬಾರ್​ ಅನ್ನು ಅರಮನೆಯೊಳಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಉಬರ್​ ಚಾಲಕನ ಪಡಿಪಾಟಿಲಿನ ಬಗ್ಗೆ ಹಾಸ್ಯ ಮಾಡಿಕೊಂಡು ಅತಿಥಿಗಳು ಸಾಂಬಾರ್​ ಅನ್ನು ಆಸ್ವಾದಿಸಿದರು. ಈ ಸಂದರ್ಭದಲ್ಲಿ ಪ್ರಿನ್ಸ್​ ವಿಲಿಯಮ್ಸ್​ ತಮ್ಮ ಫುಟ್​ಬಾಲ್​ ಪ್ರೇಮ, ವಾರಾಂತ್ಯದಲ್ಲಿ ಫುಟ್​ಬಾಲ್​ ಆಡುವ ಮೂಲಕ ತಮ್ಮೆಲ್ಲ ದುಗುಡದುಮ್ಮಾನಗಳನ್ನು ಮರೆಯುವುದು ಸೇರಿ ಹಲವು ಅನುಭವಗಳನ್ನು ಬಿಬಿಸಿ5 ಲೈವ್​ ಪಾಡ್​ಕಾಸ್ಟ್​ನಲ್ಲಿ ಹಂಚಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಎಂಫಿಲ್​ ರದ್ದು, ಪದವಿ ಶಿಕ್ಷಣ ಸ್ವರೂಪದಲ್ಲಿ ಬದಲಾವಣೆ; ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts