More

    ಪ್ರಧಾನಿ ಮೋದಿ ಮೆಚ್ಚಿಕೊಂಡ ಹುಬ್ಬಳ್ಳಿ ಬಾಲೆಯ ಯೋಗಾ ಯೋಗ; ಲಾಕ್​ಡೌನ್​ನಲ್ಲಿ ಫಿಟ್ನೆಸ್​ ಕಾಯ್ದುಕೊಳ್ಳುವುದು ಅನಿವಾರ್ಯವಂತೆ!

    ಹುಬ್ಬಳ್ಳಿ: ಲಾಕ್​ಡೌನ್​ ಸಮಯದಲ್ಲಿ ಫಿಟ್​ ಆಗಿರಲು ಯೋಗ ಮಾಡಿ ಎಂಬ ಸಂದೇಶ ಸಾರಿದ ಹುಬ್ಬಳ್ಳಿ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಣ, ಈ ಬಾಲೆಯ ಯೋಗಾಭ್ಯಾಸವನ್ನು ಮೆಚ್ಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿರುವುದು ಇದಕ್ಕೆ ಕಾರಣ.

    ನಗರದ ಓರಿಯಂಟಲ್​ ಪಬ್ಲಿಕ್​ ಸ್ಕೂಲ್​ನಲ್ಲಿ 2ನೇ ತರಗತಿಗೆ ಹೋಗಬೇಕಿರುವ 6 ವರ್ಷದ ಬಾಲಕಿ ಇರ್ಫಾ ಮುಲ್ಲಾ, ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿರುವ ಬಾಲಕಿ.

    ಲಾಕ್​ಡೌನ್​ ಸಮಯದಲ್ಲಿ ಮನೆಯೊಳಗೆ ಯೋಗ ಮಾಡುತ್ತಿರುವ ವಿಡಿಯೋವನ್ನು ಆಕೆಯ ತಂದೆ ಇಮ್ತಿಯಾಜ್​ ಮುಲ್ಲಾ ಅವರು ಕೆಲದಿನಗಳ ಹಿಂದೆ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದನ್ನು ಲೈಕ್​ ಮಾಡಿ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ ಅವರು, ಗ್ರೇಟ್​, ಸ್ಟೇ ಹೋಮ್​, ಸ್ಟೇ ಹೆಲ್ದಿ ಆ್ಯಂಡ್​ ಫಿಟ್​ (ಅದ್ಭುತ, ಮನೆಯಲ್ಲಿಯೇ ಇರಿ. ಸ್ವಸ್ಥ ಮತ್ತು ಆರೋಗ್ಯದಿಂದಿರಿ)’ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ

    ಟಿವಿ, ಪುಸ್ತಕ ನೋಡಿ ಮಗಳು ಯೋಗ ಕಲಿತಿದ್ದಾಳೆ. ಶಾಲೆಯಲ್ಲಿ ಪ್ರತಿ ಶನಿವಾರ ಶಾರೀರಿಕ ವ್ಯಾಯಾಮ ಮಾಡಿಸುತ್ತಿದ್ದರು. ಈಗ ಲಾಕ್​ಡೌನ್​ ಸಮಯದಲ್ಲಿ ಟಿವಿ ನೋಡುತ್ತ ಯೋಗ ಮಾಡುತ್ತಿದ್ದಳು. ಇದನ್ನು ನೋಡಿ ನನ್ನ ಪತ್ನಿ (ಬಾಲಕಿಯ ತಾಯಿ) ವಿಡಿಯೋ ಮಾಡಿ ನನಗೆ ಕಳುಹಿಸಿದ್ದಳು. ಈ ವಿಡಿಯೋವನ್ನು ಏ.10ರಂದು ನನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​ ನಟ ಅಕ್ಷಯ ಕುಮಾರ್​ ಇನ್ನಿತರರಿಗೆ ಟ್ಯಾಗ್​ ಮಾಡಿದ್ದೆ. ಇದನ್ನು ಏ.15ರಂದು ಗಮನಿಸಿರುವ ಪ್ರಧಾನಿ ಅವರು ರಿಟ್ವೀಟ್​ ಮಾಡಿದ್ದಾರೆ’ ಎಂದು ಇಮ್ತಿಯಾಜ್​ ಮುಲ್ಲಾ ವಿಜಯವಾಣಿಗೆ ತಿಳಿಸಿದ್ದಾರೆ.

    ಮಗಳ ಯೋಗಾಭ್ಯಾಸದ ವಿಡಿಯೋವನ್ನು ದೇಶದ ಪ್ರಧಾನಿಯವರು ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿರುವುದು ನಮ್ಮ ಪಾಲಿಗೆ ಹೆಮ್ಮೆಯ ವಿಷಯ. ಇದು ಅವಳಿಗೆ ತುಂಬಾ ಪ್ರೇರಣೆ ನೀಡಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
    ಇಮ್ತಿಯಾಜ್​ ಮುಲ್ಲಾ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts