More

    ಪ್ರಧಾನಿ ಮೋದಿಯಿಂದಲೇ ದೇಶಕ್ಕೆ ಉಜ್ವಲ ಭವಿಷ್ಯ: ಬಿ.ವೈ.ವಿಜಯೇಂದ್ರ

    ಹೊಳಲ್ಕೆರೆ: ಪ್ರಧಾನಿ ಮೋದಿ ಅವರಿಂದ ಮಾತ್ರ ಭಾರತದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದ್ದು, ಅವರ ನಾಯಕತ್ವದಲ್ಲಿ ಉಜ್ವಲ ಭವಿಷ್ಯ ಅಡಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

    ಪಟ್ಟಣದ ಅಂಬೇಡ್ಕರ್ ಸಂವಿಧಾನ ಸದನದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ರಾಜ್ಯ ಬಜೆಟ್ ಮಂಡನೆ ವೇಳೆ ಹಲವು ಬಾರಿ ದೇಶದ ಪ್ರಧಾನಿಯನ್ನು ಟೀಕಿಸಿದ್ದು, ಸಿಎಂಗೆ ಶೋಭೆ ತರುವಂತದ್ದಲ್ಲ. ವಿಶ್ವದ 26 ಕ್ಕೂ ಅಧಿಕ ರಾಷ್ಟ್ರಗಳು ಮೋದಿ ಅವರನ್ನು ಗೌರವಿಸುತ್ತಿವೆ.

    ಕೊರೋನಾ ವೇಳೆ ದೇಶದ 135 ಕೋಟಿ ಜನರಿಗೆ ಉಚಿತ ಲಸಿಕೆ, 90 ಕೋಟಿ ಮಂದಿಗೆ ಉಚಿತ ಅಕ್ಕಿ ನೀಡಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ವರ್ಗದವರ ಹಿತ ಕಾಪಾಡಿದ್ದಾರೆ. ಬಿಜೆಪಿ ಜನಪರವಾಗಿದೆ ಎಂದು ಹೇಳಿದರು.

    ಪ್ರಧಾನಿ ಮೋದಿಯಿಂದಲೇ ದೇಶಕ್ಕೆ ಉಜ್ವಲ ಭವಿಷ್ಯ: ಬಿ.ವೈ.ವಿಜಯೇಂದ್ರ

    ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. 5 ಗ್ಯಾರಂಟಿ ಘೋಷಿಸಿ ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದಿದ್ದು, ಇದು ಶಾಶ್ವತವಲ್ಲ ಎಂದರು.

    ಶಾಸಕ ಎಂ.ಚಂದ್ರಪ್ಪ ಅವರು 4.5 ಸಾವಿರ ಕೋಟಿ ರೂ. ಅನುದಾನ ತಂದು ಹೊಳಲ್ಕೆರೆ ಕ್ಷೇತ್ರದ ಇತಿಹಾಸದಲ್ಲಿಯೇ ಯಾರೂ ಮಾಡದಂತಹ ಅಭಿವೃದ್ಧಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಸ್ತೆ ರಾಜ ಎಂಬ ಬಿರುದು

    ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕ್ಷೇತ್ರಾದ್ಯಂತ ಎಲ್ಲ ಗ್ರಾಮಗಳಲ್ಲೂ ಗುಣಮಟ್ಟದ ರಸ್ತೆ ನಿರ್ಮಿಸಿರುವ ಶಾಸಕರ ಪೈಕಿ ರಾಜ್ಯದಲ್ಲಿ ಪ್ರಮುಖರಾದವರು ಹೊಳಲ್ಕೆರೆಯ ಎಂ.ಚಂದ್ರಪ್ಪ. ಹೀಗಾಗಿಯೇ ರಸ್ತೆ ರಾಜ ಎಂಬ ಬಿರುದು ಪಡೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ತಾಲೂಕಿನಾದ್ಯಂತ ವಸತಿ ಶಾಲೆ, ಮುರಾರ್ಜಿ ದೇಸಾಯಿ ಶಾಲೆ, ಬಸ್ ನಿಲ್ದಾಣ ಇವೆಲ್ಲವೂ ಗುಣಮಟ್ಟದಿಂದಲೇ ನಿರ್ಮಾಣವಾಗಿವೆ.

    ಶಾಸಕರ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಎಲ್ಲ ಕಡೆ ಕಣ್ಣಿಗೆ ಕಾಣುತ್ತಿವೆ. ಅದು ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.

    ಪ್ರಧಾನಿ ಮೋದಿಯಿಂದಲೇ ದೇಶಕ್ಕೆ ಉಜ್ವಲ ಭವಿಷ್ಯ: ಬಿ.ವೈ.ವಿಜಯೇಂದ್ರ

    ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಕರ್ತವ್ಯ

    ಶಾಸಕ ಎಂ.ಚಂದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಕರ್ತವ್ಯ. ಜವಾಬ್ದಾರಿ ಅರಿತು ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ನೀಡಿದ ಅನುದಾನದಿಂದಾಗಿ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.

    ಕ್ಷೇತ್ರದಲ್ಲಿನ ಎಲ್ಲರೂ ಸಮಾನರು. ಜಾತಿ ನಿಂದನೆ, ಗದ್ದಲ,ಗಲಾಟೆಗೆ ಅವಕಾಶ ನೀಡಲಾರೆ. ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ, ಹೊಸ ಕಾಮಗಾರಿ ಆರಂಭಿಸಿ ಮಾದರಿ ಕ್ಷೇತ್ರವಾಗಿಸಲು ಪಣ ತೊಟ್ಟಿದ್ದೇನೆ ಎಂದು ಭರವಸೆ ನೀಡಿದರು.

    ಮಾಜಿ ಶಾಸಕ ಮಂಜುನಾಥ, ಬಿಜೆಪಿ ಮುಖಂಡರಾದ ಲಿಂಗಮೂರ್ತಿ, ಜಿ.ಎಸ್.ಅನಿತ್‌ಕುಮಾರ್, ಎಂ.ಸಿ.ರಘುಚಂದನ್, ಗಾಯತ್ರಿ ಸಿದ್ದೇಶ್ವರ್, ಚಂದ್ರಕಲಾ ಚಂದ್ರಪ್ಪ, ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts