More

    ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ: ಕಾಳಪ್ಪ ಬಡಿಗೇರ ಸಲಹೆ

    ಅಳವಂಡಿ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ನೀಡುವುದು ಅವಶ್ಯ. ಮಕ್ಕಳ ಗುಣಾತ್ಮಕ ಕಲಿಕೆ ಹಾಗೂ ಶೈಕ್ಷಣಿಕ ಶ್ರೇಯಸ್ಸಿಗೆ ಶಿಕ್ಷಕರು ಶ್ರಮಿಸಬೇಕು ಎಂದು ಮುನಿರಾಬಾದ್ ಡಯಟ್ ಪ್ರಾಚಾರ್ಯ ಕಾಳಪ್ಪ ಬಡಿಗೇರ ತಿಳಿಸಿದರು.

    ಸಮೀಪದ ಬೆಟಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಳವಂಡಿ ವಲಯದ ನಲಿ-ಕಲಿ ಹಾಗೂ 4-5ನೇ ತರಗತಿಗೆ ಬೋಧಿಸುವ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

    ಮಕ್ಕಳ ಕಲಿಕೆಗೆ ಪ್ರಾಯೋಗಿಕ ಚಟುವಟಿಕೆಯೊಂದಿಗೆ ತಟ್ಟೆ ಬಳಸಿ, ಮೆಟ್ಟಿಲುಗಳ ಚಲನೆ ಮೂಲಕ ನಲಿ-ಕಲಿ ಕಲಿಕೆ ಸಾಗಬೇಕು. ಇದು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಉಳಿಯಲಿದೆ. ಮಕ್ಕಳಿಗೆ ಮೂಲ ಅಕ್ಷರಗಳು, ಗಣಿತದ ಮೂಲಕ್ರಿಯೆಗಳ ಕಲ್ಪನೆ ಅರ್ಥ ಮಾಡಿಸಬೇಕು ಎಂದರು.

    ಡಯಟ್ ಹಿರಿಯ ಉಪನ್ಯಾಸಕ ಕೃಷ್ಣ, ಸಿಆರ್‌ಪಿಗಳಾದ ವಿಜಯಕುಮಾರ ಟಿಕಾರೆ, ಬಸವರಾಜ, ದೇವರಡ್ಡಿ, ವೀರೇಶ ಕೌಟಿ, ಮುಖ್ಯ ಶಿಕ್ಷಕಿ ಬಿ.ಕಸ್ತೂರಿ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ಜೋಗಿನ, ಲಕ್ಷ್ಮಣಕುಮಾರ, ಬಸವರಾಜ, ವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts