ಮೋರಟಗಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವೀರನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಚನ್ನಬಸಪ್ಪ ದುದ್ದಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ನಾನೊಬ್ಬ ರೈತನ ಮಗ. ಗ್ರಾಮದ ಪ್ರತಿಯೊಬ್ಬ ರೈತರ ಸಮಸ್ಯೆ ಅರಿತಿರುವೆ. ಹಿರಿಯರ ಹಾಗೂ ಸೊಸೈಟಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವೆ ಎಂದು ಹೇಳಿದರು.
ಉಪಾಧ್ಯಕ್ಷ ಚನ್ನಬಸಪ್ಪ ದುದ್ದಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ನರಸಿಂಗಪ್ರಸಾದ ತಿವಾರಿ, ಮಹಿಬೂಬಸಾಬ ಕಣ್ಣಿ, ಶಂಕರಗೌಡ ಪಾಟೀಲ, ಮುತ್ತಪ್ಪ ಸಿಂಗೆ, ಶ್ರೀಶೈಲ ಕೆರಿಗೊಂಡ, ಬಸವರಾಜ ಬಳಗುಂಪಿ, ವೀರಣ್ಣ ಅರಕೇರಿ, ಮಲ್ಲಪ್ಪ ವಾಲೀಕಾರ, ಗುರಪಾದಪ್ಪ ನೆಲ್ಲಗಿ, ಸಿದ್ದಪ್ಪ ವಸ್ತಾರಿ, ವಿದ್ಯಾಧರ ಮಳಗಿ, ಈರಬಸಪ್ಪ ಮಾದರ, ಮಂಜುನಾಥ ಹಂಗರಗಿ, ರಾಕೇಶ ಮಯೂರ, ತಿಪ್ಪಣ್ಣ ಸಿನ್ನೂರ, ಮೊರಟಗಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ವಿ. ರಾಜಗಿರಿ, ಅಜೀರುದ್ದಿನ್ ವಾಲಿಕಾರ ಮತ್ತಿತರರು ಉಪಸ್ಥಿತರಿದ್ದರು.