More

    ಸಂಘಟನೆ ಬಲದಿಂದ ಸವಲತ್ತು

    ಭದ್ರಾವತಿ: ಸಂಘಟನೆಗಳು ಬಲಗೊಂಡಾಗ ಮಾತ್ರ ಸರ್ಕಾರದ ಸಲವತ್ತು ಪಡೆಯಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಪ್ರಧಾನ ಸಲಹೆಗಾರ ಎನ್.ಎಸ್.ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.

    ಭಾರತೀ ತೀರ್ಥ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಾಹ್ಮಣ ಅರ್ಚಕರು ಹಾಗೂ ಪುರೋಹಿತ ಪರಿಷತ್ ರಾಜ್ಯವ್ಯಾಪಿ ಅಸ್ತಿತ್ವಕ್ಕೆ ಬರುತ್ತಿರುವುದು ಹೆಮ್ಮೆಯ ವಿಚಾರ ಎಂದರು.

    ಪರಿಷತ್ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಒಗ್ಗಟ್ಟಿನ ಪ್ರದರ್ಶನ ತೋರುವುದು ಅಗತ್ಯ. ಪ್ರಸ್ತುತ ಕರೊನಾ ಸಂದರ್ಭದಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ. ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ನೀಡಲು ಮುಂದಾಗಬೇಕಿದೆ ಎಂದು ಹೇಳಿದರು. ತಾಲೂಕು ಅಧ್ಯಕ್ಷ ಗಣೇಶ್ ಪ್ರಸಾದ್, ರಾಘವೇಂದ್ರ ಉಪಾಧ್ಯಾಯ, ಸುಬ್ರಹ್ಮಣ್ಯ ಹೆಬ್ಬಾರ್, ರಮೇಶ್, ಮಂಜುನಾಥ್ ಇದ್ದರು.

    ತಾಲೂಕು ಘಟಕದ ನೂತನ ಪದಾಧಿಕಾರಿಗಳು: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ ತಾಲೂಕು ಘಟಕ ಅಧ್ಯಕ್ಷರಾಗಿ ಜೆ.ಪಿ.ಗಣೇಶ ಪ್ರಸಾದ್, ಕಾರ್ಯದರ್ಶಿಯಾಗಿ ಜಿ. ರಾಘವೇಂದ್ರ ಉಪಾಧ್ಯಾಯ ಆಯ್ಕೆಯಾಗಿದ್ದಾರೆ. ಜೆ.ಡಿ.ವಾಸುದೇವ (ಉಪಾಧ್ಯಕ್ಷ) ಕೆ.ಎಸ್.ಸೂರಜ್(ಖಜಾಂಚಿ), ಕೆ.ವಿ.ಪವನಕುಮಾರ್ ಉಡುಪ (ಸಂಘಟನಾ ಕಾರ್ಯದರ್ಶಿ) ಡಿ.ಗುರುಪ್ರಸಾದ್(ಜಂಟಿ ಕಾರ್ಯದರ್ಶಿ) ಜೆ.ಎನ್.ಆನಂದರಾವ್, ಎಲ್.ಆರ್. ಚಂದನ್ ಜೋಯ್್ಸ (ನಿರ್ದೇಶಕರು) ಸಂಘದ ಇತರ ಪದಾಧಿಕಾರಿಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts