More

    ತೈಲ ದರ ಕುಸಿದರೂ ಬದಲಾಗದ ಬೆಲೆ

    ನವದೆಹಲಿ: ಪಾಶ್ಚಿಮಾತ್ಯ ದೇಶಗಳಲ್ಲಿನ ಬಿಕ್ಕಟ್ಟಿನಿಂದಾಗಿ ಕಳೆದ 15 ದಿನಗಳಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆಯಲ್ಲಿ 16 ಡಾಲರ್ ಇಳಿಕೆಯಾಗಿ ಈಗ ಬ್ಯಾರೆಲ್ ಕಚ್ಚಾತೈಲದ ದರ 70 ಡಾಲರ್​ಗೆ ಕುಸಿದಿದೆ. ಆದರೆ, ದೇಶೀಯ ತೈಲ ಕಂಪನಿಗಳು ಸದ್ಯಕ್ಕೆ ತೈಲ ಬೆಲೆಗಳನ್ನು ಇಳಿಸುವ ಸಾಧ್ಯತೆಯಿಲ್ಲ ಎಂದು ಉದ್ಯಮದ ಕಾರ್ಯನಿರ್ವಾಹಕರು ಮತ್ತು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ಕಳೆದ ವರ್ಷ ಜೂನ್​ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 124 ಡಾಲರ್​ಗೆ ತಲುಪಿತ್ತು. ಅದಾದ ನಂತರ ಇಳಿಮುಖವಾಗುತ್ತಿದ್ದು ಕಳೆದ ನಾಲ್ಕು ತಿಂಗಳಲ್ಲಿ 90 ಡಾಲರ್​ಗಿಂತ ಕಡಿಮೆಯಾಗೇ ಇತ್ತು. ಆದರೆ, ಅಮೆರಿಕ ಮತ್ತು ಯುರೋಪ್​ನಲ್ಲಿ ಇತ್ತೀಚಿನ ವಾರಗಳಲ್ಲಿ ಕೆಲವು ಬ್ಯಾಂಕ್​ಗಳು ಬಂದ್ ಆದ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕತೆಯ ಆರೋಗ್ಯದ ಬಗ್ಗೆ ಕಳವಳ ಉಂಟಾಗಿದ್ದರ ಫಲವಾಗಿ ತೈಲ ಬೆಲೆಗಳಲ್ಲಿ ತೀವ್ರ ಕುಸಿತವಾಗಿದೆ. ತೀರಾ ನಾಟಕೀಯವಾಗಿರುವ ಈ ಇಳಿಕೆಯು ಹೆಚ್ಚು ಸಮಯ ಹಾಗೇ ಇರುತ್ತದೆಂದು ಹೇಳಲಾಗದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಯಾತ್ರೆ ವೇಳೆ ಕಳಚಿಬಿದ್ದ ಹಾರಗಳು; ಸೇಬು ಬಾಚಿಕೊಳ್ಳಲು ಮುಗಿಬಿದ್ದ ಕಾರ್ಯಕರ್ತರು!

    ಷೇರುಪೇಟೆ ಚೇತರಿಕೆ: ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಚೇತರಿಕೆ ದಾಖಲಾಗಿದೆ. ಉಭಯ ಷೇರುಪೇಟೆಯಲ್ಲಿ ತಲಾ ಶೇಕಡ ಒಂದರಷ್ಟು ಚೇತರಿಸಿ ಕೊಂಡಿವೆ. ಸೆನ್ಸೆಕ್ಸ್ 445.73 ಏರಿಕೆಯಾಗಿ ದಿನದ ವ್ಯವಹಾರ 58,074.68ರಲ್ಲಿ ನಿಂತಿತು. ನಿಫ್ಟಿ 119.10 ಏರಿಕೆಯಾಗಿ 17,107.50ರಲ್ಲಿ ದಿನದ ವ್ಯವಹಾರ ಮುಗಿಸಿತು.

    10 ಪೈಸೆ ಕುಸಿತ: ರೂ.ಮೌಲ್ಯ ಮಂಗಳವಾರ 10 ಪೈಸೆ ಕುಸಿತ ವಾಗಿ ಅಮೆರಿಕದ ಡಾಲರ್ ಎದುರು ಅದರ ಮೌಲ್ಯ 82.66 ರೂ. ಇಳಿದಿದೆ.

    ಬೆಳ್ಳಿ-ಬಂಗಾರ ಬೆಲೆ ಇಳಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ ಮಂಗಳವಾರ 420 ರೂ. ಇಳಿಕೆಯಾಗಿ 10 ಗ್ರಾಂ ಚಿನ್ನದ ಬೆಲೆ 59,480 ರೂ.ಗೆ ಇಳಿದಿದೆ. ಸೋಮವಾರ 60,100 ರೂ.ಗೆ ಏರುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಬೆಳ್ಳಿ ಬೆಲೆ 420 ರೂ. ಇಳಿಕೆಯಾಗಿ ಕೆಜಿ ಬೆಳ್ಳಿ ಧಾರಣೆ 68,850 ರೂ.ಗೆ ತಗ್ಗಿದೆ.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts