More

    ಸಮಾಜದ ಹಿತಕ್ಕಾಗಿ ದುಡಿದಿದ್ದ ಕೆವಿಎಸ್: ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿಕೆ

    ಮಂಡ್ಯ: ಸಮಾಜದ ಹಿತಕ್ಕಾಗಿ ಅಹರ್ನಿಶಿ ದುಡಿಯುವುದರ ಜತೆಗೆ ಸಂಪಾದಿಸಿದೆಲ್ಲವನ್ನೂ ಸದ್ಬಳಕೆ ಮಾಡಿದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರದ್ದು ಮೇರು ವ್ಯಕ್ತಿತ್ವ. ಅಂತಹ ಕುಟುಂಬದ ಕುಡಿ ಕೆ.ಎಸ್.ವಿಜಯಾನಂದ ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಪಿಇಟಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಜಯಪ್ರಕಾಶಗೌಡ ಮನವಿ ಮಾಡಿದರು.
    ಜಿಲ್ಲೆಯ ಸಾಹಿತ್ಯ, ರಂಗಭೂಮಿ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೆ ಕೆವಿಎಸ್ ಕೊಡುಗೆ ಅಪಾರ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ನಾಣ್ಡುಡಿಗೆ ಸಾಕ್ಷಿಯಾಗಿ ಬದುಕಿದ್ದವರು. ಚುನಾವಣೆ ಎಂದಾಕ್ಷಣ ಹಣಬಲ ಮತ್ತು ತೋಳ್ಬಲಗಳ ಮೇಳೈಸುವಿಕೆಯ ಇಂದಿನ ರಾಜಕಾರಣದಲ್ಲಿ ಸ್ವಂತ ಮನೆ ಇಲ್ಲದೇ, ಬಾಡಿಗೆ ಮನೆಯಲ್ಲಿದ್ದುಕೊಂಡು ಸಮಾಜ ಸೇವೆಗೆ ನಿರತರಾಗಿರುವ ಕೆ.ವಿ.ಶಂಕರಗೌಡ ಮೊಮ್ಮೊಗ ವಿಜಯಾನಂದ ಅವರ ಸ್ಪರ್ಧೆಯನ್ನು ಬೆಂಬಲಿಸುವಂತೆ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
    ಪಾರದರ್ಶಕ ಆಡಳಿತ, ಶಿಕ್ಷಣದ ಉನ್ನತಿಗೆ ಶ್ರಮಿಸಿದ್ದ ಕೆ.ವಿ.ಶಂಕರಗೌಡರು ’’ಮಂಡ್ಯದ ಶಿಲ್ಪಿ’’ ಎಂದೇ ಗೌರವಕ್ಕೆ ಪಾತ್ರರಾದವರು. ಜಿಲ್ಲಾ ಕೇಂದ್ರದಲ್ಲಿ ರೈತರ ಸೊಸೈಟಿ, ಡಿಸಿಸಿ ಬ್ಯಾಂಕ್, ಜನತಾ ಶಿಕ್ಷಣ ಸಂಸ್ಥೆಯಂತಹ ಸಾರ್ವಜನಿಕ ಸ್ನೇಹಿ ಸಂಸ್ಥೆಗಳನ್ನು ಆರಂಭಿಸಿ ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡಿದ್ದ ಗೌಡರ ಉದಾರತೆಗೆ ಜಿಲ್ಲೆಯ ಜನತೆ ಅಭಾರಿಯಾಗಿರಬೇಕಿದೆ. ಶಿಕ್ಷಣ ಸಚಿವ, ಸಂಸದರಾಗಿ ಮಾಡಿರುವ ಸಾಧನೆಗಳು ಅಪಾರ. ಕನ್ನಡದ ಏಕೈಕ ವಿಶ್ವಕೋಶದ ರೂವಾರಿಯಾಗಿದ್ದ ಗೌಡರ ರಾಜಕೀಯ ಪರಂಪರೆಯನ್ನು ಉಳಿಸಲು ವಿಜಯಾನಂದ ಸಮರ್ಥ ಆಭ್ಯರ್ಥಿಯಾಗಿದ್ದಾರೆ ಎಂದರು.
    ನಿವೃತ್ತ ಪ್ರಾಂಶುಪಾಲರಾದ ಡಾ.ರಾಮಲಿಂಗಯ್ಯ, ಎಸ್.ಬಿ.ಶಂಕರೇಗೌಡ, ಶಿವಣ್ಣಗೌಡ, ಶಿವರುದ್ರಪ್ಪ ಉಪಸ್ಥಿತರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts