More

    ಭೀಮಸೇನಗೆ “ಜೀವಮಾನ ಸಾಧನೆ’ ನಿವೇದಿತಾಗೆ “ಅವ್ವ ಪ್ರಶಸ್ತಿ’ ಪ್ರದಾನ

    ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾಷಿರ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಭೀಮಸೇನ ಪದಕಿ ಅವರಿಗೆ “ಜೀವಮಾನ ಸಾಧನೆ’ ಹಾಗೂ ನಿವೇದಿತಾ ನಾಗರಾಜರಾವ್​ ಅವರಿಗೆ “ಅವ್ವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
    ವಾಷಿರ್ಕ ಪ್ರಶಸ್ತಿ ಪುರಸತರು : “ವಿಜಯವಾಣಿ’ಯ ಹಿರಿಯ ವರದಿಗಾರ ಬಸವರಾಜ ಇದ್ಲಿ ಹಾಗೂ ಪ್ರಜಾವಾಣಿಯ ವರದಿಗಾರ ಎಸ್​.ಎಸ್​.ಗೋವರ್ಧನ ಅವರಿಗೆ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ. ಉದಯವಾಣಿ ನವಲಗುಂದ ವರದಿಗಾರ ಪುಂಡಲೀಕ ಮುಧೋಳ ಹಾಗೂ ವಿಜಯ ಕರ್ನಾಟಕದ ಉಪ್ಪಿನಬೆಟಗೇರಿ ವರದಿಗಾರ ಪ್ರಕಾಶ ಹೂಗಾರ ಅವರಿಗೆ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಲಭಿಸಿದೆ.
    ಸಂಯುಕ್ತ ಕರ್ನಾಟಕದ ವಿನಾಯಕ ದೇಶಪಾಂಡೆ ಹಾಗೂ ಉದಯವಾಣಿ ವಿನಾಯಕ ನಾಯಕ ಅವರಿಗೆ ಅತ್ಯುತ್ತಮ ಲೇಖನ ಪ್ರಶಸ್ತಿ, ಡೆಕ್ಕನ್​ ಹೆರಾಲ್ಡ್​ನ ಶಾಹೀನ ಮೊಕಾಶಿಗೆ ಅತ್ಯುತ್ತಮ ಆಂಗ್ಲಭಾಷಾ ವರದಿ ಪ್ರಶಸ್ತಿ, ವಿಜಯವಾಣಿ ಗುರು ಭಾಂಡಗೆಗೆ ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ, ಸಂಯುಕ್ತ ಕರ್ನಾಟಕದ ಎ.ಆರ್​.ಆನಂದಗೆ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿ, ಟಿವಿ 9 ವರದಿಗಾರ ದತ್ತಾತ್ರೇಯ ಪಾಟೀಲ, ಕ್ಯಾಮರಾಮನ್​ ಶಿವಾಜಿ ಲಾತೂರಕರ ಮತ್ತು ಟಿವಿ 5ನ ವರದಿಗಾರ ಯಲ್ಲಪ್ಪ ಸೋಲಾರಗೊಪ್ಪ ಹಾಗೂ ಕ್ಯಾಮರಾಮನ್​ ಪಿ.ಶೇಖರಗೆ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿ ಹಾಗೂ ಮಹಾಂತ ಕಾಲೇಜು ವಿದ್ಯಾಥಿ೯ ಬಸವರಾಜ ವಗರನಾಳಗೆ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕ ಭಾಷಣ, ಮಹಾಪೌರ ಈರೇಶ ಅಂಚಟಗೇರಿ ಉದ್ಘಾಟನಾ ಭಾಷಣ ಹಾಗೂ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಅಧ್ಯಯ ಭಾಷಣ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಹಿರಿಯ ಪತ್ರಕರ್ತ ಆರ್​.ಪಿ.ಜಗದೀಶ, ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ, ಹಾಗೂ ವಿವಿಧ ದಿನಪತ್ರಿಕೆಗಳ ಸ್ಥಾನಿಕ ಸಂಪಾದಕರು, ಸಂದ ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

    ಸಂಘದ ಪ್ರಧಾನ ಕಾರ್ಯದಶಿ೯ ಸುಶಿಲೇಂದ್ರ ಕುಂದರಗಿ ಸ್ವಾಗತಿಸಿದರು. ಶ್ರೀಧರ ಕುಲಕಣಿ೯ ಪ್ರಾಥಿರ್ಸಿದರು. ಪ್ರಕಾಶ ನೂಲ್ವಿ ವಂದಿಸಿದರು. ಕೇಶವಮೂತಿ೯ ವಿ.ಬಿ. ಹಾಗೂ ಕಲಾವತಿ ಬೈಚಬಾಳ ನಿರೂಪಿಸಿದರು.
    ಉತ್ತಮ ಬರಹಗಳು ಸದನದಲ್ಲಿ ದಾಖಲಾಗಿವೆ
    ಪತ್ರಿಕಾರಂಗ ನಾಲ್ಕನೇ ಅಂಗವಾಗಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಪ್ಪು ಮಾಡಿದಾಗ ತಿದ್ದುವ ಕೆಲಸವನ್ನು ಮಾಡುತ್ತದೆ. ಪತ್ರಿಕೆಯಲ್ಲಿ ಪ್ರಕಟವಾದ ಉತ್ತಮ ಬರಹಗಳು ಸದನದಲ್ಲಿ ದಾಖಲಾಗಿವೆ. ಇತ್ತೀಚೆಗೆ ಮಾಧ್ಯಮಗಳು ಬದಲಾಗುತ್ತಿವೆ. ಬಲಾವಣೆ ಜಗದ ನಿಯಮ. ಅದರ ಜತೆಗೆ ಸತ್ಯ ಹಾಗೂ ನೈಜ ಸುದ್ದಿಗಳಿಗೆ ಮಾನ್ಯತೆ ಕೊಡಬೇಕು ಎಂದು ವಿಧಾನ ಪರಿಷತ್​ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts