More

    ಮುರ್ಮು vs ಸಿನ್ಹಾ: ಮತಎಣಿಕೆ ಆರಂಭ, ಇನ್ನು ಕೆಲವೇ ಗಂಟೆಗಳಲ್ಲಿ ಫಲಿತಾಂಶ

    ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಜುಲೈ 18ರಂದು ನಡೆದ ಚುನಾವಣೆಯ ಕುತೂಹಲಕ್ಕೆ ಇಂದು (ಜುಲೈ 21) ತೆರೆ ಬೀಳಲಿದೆ. ಬೆಳಗ್ಗೆ 11 ಗಂಟೆಗೆ ಮತಎಣಿಕೆ ಆರಂಭವಾಗಿದೆ.

    ಎಲ್ಲ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ತಿನಲ್ಲಿದ್ದು, ರೂಮ್​ ನಂಬರ್ 63ರಲ್ಲಿ ಮತಎಣಿಕೆ ನಡೆಯುತ್ತಿದೆ. ಇಂದು ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಫಲಿತಾಂಶ ಹೊರ ಬೀಳಲಿದ್ದು, ಭಾರತದ 15ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.

    ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 99 ಮತದಾನ ಆಗಿತ್ತು. ಸಂಸದರು ಮತ್ತು ವಿಧಾಸಸಭಾ ಸದಸ್ಯರು ಸೇರಿ 4,800 ಮಂದಿ ಈ ಚುನಾವಣೆಯ ಮತದಾರರಾಗಿದ್ದರು. ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಮುಮು ಗೆಲುವು ಬಹುತೇಕ ಖಚಿತವಾಗಿದೆ. ಮುರ್ಮು ಅವರೇ ಆಯ್ಕೆಯಾದರೆ, ಭಾರತದ ಮೊದಲ ಆದಿವಾಸಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಯನ್ನು ಗಳಿಸಲಿದ್ದಾರೆ.

    ಕೋಟಿ ಕೋಟಿ ಹಣ ಸಂಪಾದಿಸಲು ರಿಷಭ್​ ಪಂತ್​ಗೆ ಹೀಗೊಂದು ಸಲಹೆ ಕೊಟ್ಟ ಶೋಯೆಬ್​ ಅಖ್ತರ್!

    ಹಿರಿಯ ಚಿಂತಕ, ವಿಮರ್ಶಕ, ಪ್ರಗತಿಪರ ಹೋರಾಟಗಾರರ ಜಿ. ರಾಜಶೇಖರ್ ನಿಧನ

    ಕೆರೂರು ಗುಂಪು ಘರ್ಷಣೆ ಕೇಸ್​: ಗಾಯಾಳು ಮುಂದೆ ಬಸವಣ್ಣನವರ ವಚನ ಹೇಳಿದ ADGP ಅಲೋಕ್​ ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts