More

    ಪ್ರೇರಣಾ ಶಿಬಿರ

    ತಲ್ಲೂರು: ಶಾಲೆಗೆ ಹೋಗಿಲ್ಲ..ಅಕ್ಷರ ಜ್ಞಾನವಿಲ್ಲ.. ದಡ್ಡ ಹೆಡ್ಡಿ ಎನ್ನುವ ಕಾಲವಿದಲ್ಲ… ಎಲ್ಲ ಕಡೆಯೂ ಎಲ್ಲರಲ್ಲೂ ಬದಲಾವಣೆಯಾಗಿದೆ. ಶಾಲೆಗೆ ಹೋಗಿ ಅಕ್ಷರ ಕಲಿತ ಮಾತ್ರಕ್ಕೆ ಅವರು ವಿದ್ಯಾವಂತರಲ್ಲ. ತಮ್ಮ ವ್ಯವಹಾರ ನಿರ್ವಹಿಸುವ, ಹಣ ಗಳಿಸುವ, ಉಳಿಸುವ, ಹಣ ಲೆಕ್ಕಾಚಾರ, ಬ್ಯಾಂಕ್ ವ್ಯವಹಾರ ನಿರಾಯಾಸವಾಗಿ ಮಾಡುವ ವ್ಯವಹಾರ ಜ್ಞಾನ ಇರುವವರು ಹೆಡ್ಡರೂ ಅಲ್ಲ, ದಡ್ಡರೂ ಅಲ್ಲ, ಅವರು ನಿಜವಾದ ವಿದ್ಯಾವಂತರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತಿದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂದಾಪುರ -ಬೈಂದೂರು, ಪ್ರಗತಿಬಂಧುಗಳ ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ತಲ್ಲೂರಿನಲ್ಲಿ ಬುಧವಾರ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳ ಪದಗ್ರಹಣ, ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಗಳ ವಿತರಣೆ, ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಓದಿದವರು ಬುದ್ದಿವಂತೆ, ಓದದವರು ದಡ್ಡಿ ಎನ್ನುವ ಕಾಲ ಹೋಗಿದೆ. ವ್ಯವಹಾರದ ಜ್ಞಾನ ತಿಳಿದುಕೊಂಡರೆ, ಸಂಪಾದನೆ ಮಾಡಿದರೆ, ಉಳಿತಾಯ, ಬಂಡವಾಳ ತಂದರೆ ಯಶಸ್ಸು ಸಿಗುತ್ತದೆ. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಇಂದು ಸಾಧನೆ ಸಾಧ್ಯವಾಗಿದೆ ಎಂದರು. ಕುಂದಾಪುರ ತಾಪಂ ಅಧ್ಯಕ್ಷತೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಜಿಪಂ ಸದಸ್ಯೆ ಜ್ಯೋತಿ ಎಂ.ನಾಯ್ಕ, ತಾಪಂ ಸದಸ್ಯರಾದ ರಾಜು ದೇವಾಡಿಗ, ಕರಣ ಪೂಜಾರಿ, ತಲ್ಲೂರು ಗ್ರಾಪಂ ಅಧ್ಯಕ್ಷ ಆನಂದ ಬಿಲ್ಲವ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ, ಅಖಿಲ ಕರ್ನಾಟಕ ಜಿಲ್ಲಾ ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಶ್ರೀ ಶೇಷಶಯನ ಕನ್ವೆನ್ಷನ್ ಹಾಲ್ ಮಾಲೀಕ ಶ್ರೀನಿವಾಸ ಉಳ್ಳೂರು, ಪಾರ್ವತಿ ಎಸ್.ಉಳ್ಳೂರು, ಉಡುಪಿ ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಶೋಭಾ ಚಂದ್ರ ಇದ್ದರು. ವಿವಿಧ ಒಕ್ಕೂಟ ಸದಸ್ಯರನ್ನು ಡಾ.ವೀರೇಂದ್ರ ಹೆಗ್ಗಡೆ ಗೌರವಿಸಿದರು. ಜನಜಾಗೃತಿ ವೇದಿಕೆ ನಿರ್ಗಮಿತ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ 21ನೇ ರ‌್ಯಾಂಕ್ ಪಡೆದ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಬೈಂದೂರು ವೇದಿಕೆ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ತಲ್ಲೂರು ವೈಷ್ಣವಿ ಆಚಾರ್ಯ ಪ್ರಾರ್ಥಿಸಿದರು. ಜಿಲ್ಲಾ ನಿರ್ದೇಶಕ ಗಣೇಶ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಚೇತನ್ ಕುಮಾರ್ ಮತ್ತು ಬೈಂದೂರು ಮೇಲ್ವಿಚಾರಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ಆರ್.ನವೀನ್‌ಚಂದ್ರ ವಂದಿಸಿದರು. ಕರುಣಾಕರ ಜೈನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

    ಮಗು ಪರಾವಲಂಬಿಯಾಗಿದ್ದು, ಎರಡು ಮೂರು ವರ್ಷದ ನಂತರ ಮಗುವಿಗೆ ಅಜ್ಜ -ಅಜ್ಜಿ ಆಶ್ರಯ ಬೇಕಾಗುತ್ತದೆ. ಶಾಲೆಗೆ ಹೋಗಲು ಆರಂಭಿಸಿದಾಗ ಅಲ್ಪಸ್ವಲ್ಪ ಅಕ್ಕ ಪಕ್ಕದವರನ್ನು ಪ್ರೀತಿಸಲು ಆರಂಭಿಸುತ್ತದೆ. ಎಸ್ಸೆಸ್ಸೆಲ್ಸಿಗೆ ಬಂದ ನಂತರ ಓದು ಇನ್ನಿತರ ಸಲಹೆ ನೀಡುವುದರಿಂದ ತಾಯಿ ತಂದೆ ಮೇಲೆ ಸಿಟ್ಟು ಬರುತ್ತದೆ. ನಂತರ ಸ್ವತಂತ್ರವಾಗಿ ಬದುಕಲು ಬಯಸುತ್ತದೆ. ಬಯಕೆ, ಕಾಮನೆಗಳು ಹುಟ್ಟುತ್ತವೆ. ದುಡಿಮೆ ವಯಸ್ಸಲ್ಲ್ಲಿ ಮದುವೆ, ಮಕ್ಕಳು, ಮನೆ ಕಟ್ಟಬೇಕು ಎಂಬ ಆಸೆ ಹುಟ್ಟುತ್ತದೆ. ಸಣ್ಣ ಮಗು ದೊಡ್ಡದಾದ ಹಾಗೆ ಚಿಂತನೆ, ಭಾವನೆ, ಜೀವನಶೈಲಿ ಬದಲಿಸುವ, ನಾವು ಸ್ವತಂತ್ರ ಜೀವನ ಮಾಡುವಾಗ ಆಹಾರ ವಿಹಾರ, ಸ್ನೇಹಿತರು, ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಶಸ್ಸು ನೆಮ್ಮದಿ, ಸಂತೋಷ ಜೀವನ ಸಿಗಬೇಕಿದ್ದರೆ ಶಿಸ್ತು ಮುಖ್ಯ.
    ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts