More

    ರೈತ ಹುತಾತ್ಮ ದಿನಾಚರಣೆಗೆ ಸಿದ್ಧತೆ ಕೈಗೊಳ್ಳಿ

    ನರಗುಂದ: ಪಟ್ಟಣದಲ್ಲಿ ಜು.21ರಂದು ಹಮ್ಮಿಕೊಂಡಿರುವ ರೈತ ಹುತಾತ್ಮ ದಿನಾಚರಣೆಗೆ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು, ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.

    ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    1980ರ ಜು.21ರಂದು ರೈತ ಬಂಡಾಯದಲ್ಲಿ ಹುತಾತ್ಮರಾದ ಈರಪ್ಪ ಕಡ್ಲಿಕೊಪ್ಪ ಸ್ಮರಣಾರ್ಥ ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಪ್ರತಿವರ್ಷ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಶಾಂತಿಯುತವಾಗಿ ಆಚರಿಸಲು ಆದ್ಯತೆ ನೀಡಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ವಿವಿಧ ಕನ್ನಡಪರ, ರೈತಪರ ಸಂಘಟನೆಗಳಿಗೆ ನೀಡಿರುವ ನಿಗದಿತ ಸಮಯದಲ್ಲಿಯೇ ವೀರಗಲ್ಲಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು. ಪುರಸಭೆಯಿಂದ ವೀರಗಲ್ಲಿನ ಸುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ತಾಲೂಕಿನಾದ್ಯಂತ ಅಹಿತಕರ ಘಟನೆಗಳು ಸಂಭವಿಸದಂತೆ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ವೈ.ಎಸ್. ಏಗನಗೌಡ್ರ ಅವರಿಗೆ ಸೂಚಿಸಿದರು.

    ಅಪ್ಪಣಗೌಡ ನಾಯ್ಕರ, ಚನ್ನು ನಂದಿ, ರವಿ ಚಿಂತಾಲ, ಬಸವರಾಜ ಸಾಬಳೆ, ವಿಠ್ಠಲ ಜಾಧವ, ಎಸ್.ಬಿ. ಜೋಗಣ್ಣವರ, ತಾಪಂ ಇಒ ಮಂಜುಳಾ ಹಕಾರಿ, ಆನಂದ ಬನಪ್ಪನವರ, ಸಂಗಮೇಶ ಬ್ಯಾಳಿ, ವೀರಬಸಪ್ಪ ಹೂಗಾರ, ನಭಿಸಾಬ್ ಕಿಲ್ಲೇದಾರ, ಪರಶುರಾಮ ಜಂಬಗಿ, ಹನುಮಂತ ಸರನಾಯ್ಕರ್, ಬಿ.ಡಿ. ಪಾಟೀಲ, ಪ್ರಕಾಶ ಹಡಗಲಿ, ಅಜ್ಜುಗೌಡ ಪಾಟೀಲ, ಆರ್.ಎನ್. ಪಾಟೀಲ, ಎಂ.ಬಿ. ಅರಹುಣಸಿ, ಬಸು ಘಾಟಗೆ, ವಿಷ್ಣು ಸಾಠೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts