More

    ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆ

    ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ.26 ರಂದು ನಡೆಯಲಿರುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರದಲ್ಲಿ 19,81,347 ಮತದಾರರಿದ್ದು ಈ ಪೈಕಿ 9,83,775 ಪುರುಷರು, 9,97,306 ಮಹಿಳೆಯರು, 266 ಇತರರು ಸೇರಿದ್ದಾರೆ. ಏ.26 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
    ಕ್ಷೇತ್ರದಲ್ಲಿ 40 ಮಹಿಳಾ ಮತಗಟ್ಟೆಗಳು, 8 ಅಂಗವಿಕರ ಮತಗಟ್ಟೆಗಳು, 8 ಯುವ ನೌಕರರ ಮತಗಟ್ಟೆಗಳು ಹಾಗೂ 8 ಎಥ್ನಿಕ್ ಮತಗಟ್ಟೆಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಎಲ್ಲ ಚೆಕ್‌ಪೋಸ್ಟ್ ಗಳಲ್ಲಿ 24/7 ಗಂಟೆಗಳ ಕಾಲ ನಿಗಾ ಇಡಲಾಗಿದ್ದು, ಅಕ್ರಮವಾಗಿ ಸಾಗಾಣಿಕೆಯ ಮದ್ಯ, ಹಣ ಮತ್ತು ಇತರೆ ಉಡುಗೊರೆಗಳನ್ನು ವಶಕ್ಕೆ ಪಡೆಯಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿz.

    *ನಿಷೇಧಾಜ್ಞೆ ಘೋಷಣೆ
    ಮತದಾನದ ಹಿನ್ನೆಲೆಯಲ್ಲಿ ಏ.24 ರ ಸಂಜೆ 6 ರಿಂದ ಏ.27 ರ ಬೆಳಿಗ್ಗೆ 6 ರವರೆಗೆ ಕ್ಷೇತ್ರಾದ್ಯಂತ ನಿಷೇಧಾಜ್ಞೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಭೆ, ಸಮಾರಂಭ ಮತ್ತು ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಕಾರಣವಿಲ್ಲದೇ ನಾಲ್ಕಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವಂತಿಲ್ಲ. ಯಾವುದೇ ಸಂತೆ, ಜಾತ್ರೆ ಮತ್ತು ಇತರೆ ಜನಸಮೂಹ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿಲ್ಲ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    *ಒಣ ದಿನ ಘೋಷಣೆ
    ಏ.24 ರ ಸಂಜೆ 6 ರಿಂದ ಏ.26 ರ ಮಧ್ಯರಾತ್ರಿ 12 ರವರೆಎ ಒಣ ದಿನವನ್ನು ಘೋಷಿಸಲಾಗಿದ್ದು ಈ ಅವಧಿಯಲ್ಲಿ ಎಲ್ಲ ಮದ್ಯದ ಅಂಗಡಿಗಳು ಮುಚ್ಚಲು ಸೂಚಿಸಲಾಗಿದೆ.

    * ದೂರು ಕೊಡಬಹುದು
    ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಯಾರಾದರೂ ಮತದಾರರಿಗೆ ಯಾವುದೇ ಅಮಿಷಗಳನ್ನೊಡ್ಡುವುದಕ್ಕೆ ಸಂಬಂಧಿಸಿದಂತೆ ದೂರುಗಳನ್ನು CVigil App ಮೂಲಕ ಸಲ್ಲಿಸಬಹುದು. ಜಿಲ್ಲಾ ಮಟ್ಟದಲ್ಲಿ ತೆರಯಲಾಗಿರುವ ಕಂಟ್ರೋಲ್ ರೂಂ ನಂ. 1950 & 08156-277071 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ರವೀಂದ್ರ ತಿಳಿಸಿದ್ದಾರೆ.

    *ನಾಗಾರ್ಜುನ ಕಾಲೇಜಿನಲ್ಲಿ ಮತ ಎಣಿಕೆ
    ವಿಧಾನಸಭಾ ಕ್ಷೇತ್ರವಾರು ಗುರುತಿಸಲಾಗಿರುವ ಕೇಂದ್ರಗಳಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ನಡೆಯಲಿದ್ದು, ಬಳಿಕ ಮತ ಚಲಾವಣೆಯಾದ ಇವಿಎಂಗಳನ್ನು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಜಿ.ಪಿ.ಎಸ್ ಅಳವಡಿಕೆಯ ಕ್ಲೋಸ್ಡ್ ಕಂಟೈನರ್ ವಾಹನದಲ್ಲಿ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗೆ ತಂದು ಇಡಲಾಗುತ್ತದೆ. ಇಲ್ಲಿ ಜೂ.4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts