More

    ಕಡಿಮೆ ಬಜೆಟ್​ನ ‘ಪ್ರೇಮಲು’ 13ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಕೇಳಿದ್ರೆ ಹೌಹಾರ್ತೀರಾ?

    ತಿರುವನಂತಪುರಂ: ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಸದ್ದು ಮಾಡುತ್ತಿರುವ ಸಿನಿಮಾ ಮಲಯಾಳಂನ ‘ಪ್ರೇಮಲು’. ಇದಕ್ಕೆ ಕಾರಣವೂ ಇಲ್ಲದಿಲ್ಲ, ಕಡಿಮೆ ಬಜೆಟ್​ಅಂದರೆ ಕೇವಲ 12.5 ಕೋಟಿ ರೂ.ವೆಚ್ಚದ ಈ ಚಿತ್ರ 13 ದಿನಗಳಲ್ಲಿ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್ ಕಲೆಕ್ಷನ್ 50 ಕೋಟಿ ರೂ.ಗಳಿಸಿ ಎಲ್ಲರ ಗಮನಸೆಳೆದಿದೆ.

    ಇದನ್ನೂ ಓದಿ: ಕಬ್ಬಿನ ಖರೀದಿ ದರ ಹೆಚ್ಚಳ..ರೈತರ ಕಲ್ಯಾಣಕ್ಕೆ ಕೇಂದ್ರ ಬದ್ಧ: ಪ್ರಧಾನಿ ಮೋದಿ

    ನಸ್ಲೆನ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ರೇಮಲು ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. “ತಣ್ಣೀರ್ ಮಥನ್ ದಿನಂಗಳು” ಚಿತ್ರದ ಗಿರೀಶ್ ನಿರ್ದೇಶಿಸಿದ್ದಾರೆ, ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಕಥಾಹಂದರ, ಸಂಗೀತ, ಹಾಸ್ಯ ಮತ್ತು ಪಾತ್ರವರ್ಗದ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು.

    ಈ ಚಲನಚಿತ್ರವು ವಿಶ್ವಾದ್ಯಂತ 51.9 ಕೋಟಿ ರೂ. (ಯುಎಸ್​ $6.5 ಮಿಲಿಯನ್) ಗಳಿಸಿದೆ. ಅಷ್ಟೇ ಅಲ್ಲ, 2024 ರ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಲನಚಿತ್ರವಾಗಿ ಹೊರಹೊಮ್ಮಿದೆ. 2024 ರ ಎಂಟನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿಯೂ ಗಮನಸೆಳೆದಿದೆ.
    ಕಡಿಮೆ ಬಜೆಟ್​ನ ಚಿತ್ರವೊಂದು ವಾಸ್ತವ ಮತ್ತು ಪ್ರೇಮಕಥೆ ಹೊಂದಿ ಯಶಸ್ವಿ ಚಿತ್ರವಾಗಿರುವುದು ಚಿತ್ರರಂಗದ ಮೆಚ್ಚುಗೆಗೆ ಪಾತ್ರವಾಗಿದೆ.

    ಮನಮಿಡಿಯುವಂತಿದೆ ಸಮಂತಾ – ನಾಗ ಚೈತನ್ಯ ವಿಡಿಯೋ… ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts