More

    ವಾಲ್ಮೀಕಿ ಜಯಂತಿ, ರಾಜ್ಯೋತ್ಸವ ವಿಜೃಂಭಣೆ

    ಪೂರ್ವಭಾವಿ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಹೇಳಿಕೆ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಅಕ್ಟೋಬರ್ 28 ರಂದು ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
    ನಗರದ ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ವಾಲ್ಮೀಕಿ ಜಯಂತಿ ಆಚರಣೆಗೆ ಸಮುದಾಯದ ಮುಖಂಡರಿಂದ ಭಿನ್ನ ವಿಭಿನ್ನ ಅಭಿಪ್ರಾಯಗಳನ್ನು ಆಲಿಸಿದ ಶಾಸಕ ಶರತ್ ಬಚ್ಚೇಗೌಡ, ವಾಲ್ಮೀಕಿ ಭವನ ನಿರ್ಮಾಣ ಪೂರ್ಣಗೊಳ್ಳುವವರೆಗೆ ಅದ್ದೂರಿ ಆಚರಣೆ ಬೇಡ ಎಂಬ ಬಹುತೇಕ ಮುಖಂಡರ ಸಲಹೆ ಉತ್ತಮವಾದದ್ದಾಗಿದ್ದು ತಾಲೂಕು ಕಚೇರಿಯ ಮುಂಭಾಗ ವೇದಿಕೆ ನಿರ್ಮಿಸಿ ತಾಲೂಕಿನಾದ್ಯಂತ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗುರುತಿಸಿ, ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರದ ಟಿಎಸ್ ಪಿ ಅನುದಾನದಲ್ಲಿ ಅವಕಾಶ ಇದ್ದಲ್ಲಿ ಆರ್ಥಿಕ ಸಹಕಾರ ನೀಡಿ ಗೌರವಿಸುವುದು ಹಾಗೂ ತಾಲೂಕಿನ 28 ಗ್ರಾಪಂಗಳಲ್ಲಿ ವಾಲ್ಮೀಕಿ ಸಮುದಾಯದ ಜನಪ್ರತಿನಿಧಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸಮುದಾಯದವರು, ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗದವರೆಲ್ಲಾ ಸೇರಿ ಆಚರಿಸೋಣ ಎಂದರು.

    ಅದ್ದೂರಿ ರಾಜ್ಯೋತ್ಸವ
    ನವೆಂಬರ್ 1 ರಂದು ತಾಯಿ ಭುವನೇಶ್ವರಿ ಮೆರವಣಿಗೆ ಮೂಲಕ ತಾಲೂಕಿನ ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಜನಪರ ಸಂಘಟನೆಗಳು ಹಾಗೂ ತಾಲೂಕಿನ ಸರ್ವರೂ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಒಟ್ಟಾಗಿ ಆಚರಿಸೋಣ ಎಂದರು
    ಉದ್ಘಾಟನೆಗೆ ಸಿದ್ಧವಾಗಿರುವ ಸೂಲಿಬೆಲೆ ವಾಲ್ಮೀಕಿ ಭವನದ ಲೋಕಾರ್ಪಣೆ ಕಾರ್ಯ ಒಬ್ಬ ವ್ಯಕ್ತಿ ಮಾಡುತ್ತಿರುವ ಸಮಸ್ಯೆಯಿಂದ ವಿಳಂಭವಾಗುತ್ತಿದೆ, ಇದರಿಂದ ಸಮುದಾಯದ ಬಹಳಷ್ಟು ಜನಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವನ ಉದ್ಘಾಟನೆಗೆ ತೊಡಕಾಗದಂತೆ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಸಮಸ್ಯೆ ಬಗೆಹರಿಸಿದರೆ ವಾಲ್ಮೀಕಿ ಜಯಂತಿಯಂದೇ ಉದ್ಘಾಟಿಸೋಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts