More

    ಗರ್ಭಿಣಿಯರು, ಅಂಗವಿಕಲರ ನಿಯೋಜನೆ ಸಲ್ಲ

    ಅರಕೇರಾ: ಅಂಗವಿಲಕರು, ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳ ತಾಯಂದಿರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿರುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಉಪ ತಹಸೀಲ್ದಾರ್ ಮನೋಹರ್ ನಾಯಕಗೆ ಕಲ್ಯಾಣ ಕರ್ನಾಟಕ ವಿಮೋಚನಾ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್ ಗಣೇಕಲ್ ಮನವಿ ಸಲ್ಲಿಸಿದರು.

    ವಿಧಾನಸಭಾ ಚುನಾವಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಸಿಬ್ಬಂದಿ ನಿಯೋಜಿಸಿದ್ದು, ಸರ್ಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ತಾಲೂಕಿನ ಕೆಲ ಶಾಲೆಗಳ ಶಿಕ್ಷಕಿಯರು ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳ ತಾಯಂದಿರಾಗಿದ್ದರೂ ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ನಿಯಮಗಳನ್ನು ಮೀರಿ ಸುಡು ಬಿಸಿಲಿನಲ್ಲಿ ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳ ತಾಯಂದಿರು ಕಾರ್ಯನಿರ್ವಹಿಸಲು ಸಮಸ್ಯೆಯಾಗಲಿದೆ. ಇದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಆಗಲಿದೆ. ಕೂಡಲೇ ಅಂಥವರನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಕಾರ್ಯದರ್ಶಿ ವೀರಮ್ಮ ಅಗಳಕೇರ ಇತರರಿದ್ದರು.

    ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ; ಮುಂದೆ ಮಗ ಯತೀಂದ್ರ, ಮೊಮ್ಮಗ ಧವನ್ ಇದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts