More

    ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

    ಎಕ್ಸ್‌ಪರ್ಟ್ ಕಾಲೇಜಿಗೆ ಶೇ.100 ಫಲಿತಾಂಶ
    ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.100 ಫಲಿತಾಂಶದ ಸಾಧನೆ ಮಾಡಿದೆ. ಪರೀಕ್ಷೆ ಬರೆದ 1439 ವಿದ್ಯಾರ್ಥಿಗಳಲ್ಲಿ 1437 ವಿದ್ಯಾರ್ಥಿಗಳು (ಶೇ.99.86) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

    ಶೇ.95ಕ್ಕಿಂತ ಅಧಿಕ ಅಂಕವನ್ನು 168 ವಿದ್ಯಾರ್ಥಿಗಳು, ಶೇ.90ಕ್ಕಿಂತ ಅಧಿಕ ಅಂಕವನ್ನು 713 ವಿದ್ಯಾರ್ಥಿಗಳು, ಶೇ.85ಕ್ಕಿಂತ ಅಧಿಕ ಅಂಕವನ್ನು 1067 ವಿದ್ಯಾರ್ಥಿಗಳು ಪಡೆದಿದ್ದಾರೆ.
    ವಿಭಾ ಕಾರ್ನಾಡ್, ಪ್ರತೀಕ್ಷಾ ನರಸಿಂಹ ನಾಯಕ್, ಅಶ್ವಿನಿ ಪ್ರಭು ಜಿ, ಶ್ರೇಯಾ ಎಸ್ ಹಾಗೂ ಸುಧೀಕ್ಷಾ ಸದಾನಂದ ಕುಮಾರ್ ಅವರು 600ರಲ್ಲಿ 587 ಅಂಕ ಪಡೆದು ಕಾಲೇಜಿನ ಟಾಪರ್‌ಗಳಾಗಿದ್ದಾರೆ. ಅಶ್ವಿನಿ ಪ್ರಭು ಜಿ. ಹಾಗೂ ವಿಭಾ ಕಾರ್ನಾಡ್ ಅವರು ನಾಲ್ಕು ಮತ್ತು ಪ್ರತೀಕ್ಷಾ ನರಸಿಂಹ ನಾಯಕ್, ಶ್ರೇಯಾ ಎಸ್, ಸುಧೀಕ್ಷಾ ಸದಾನಂದ ಕುಮಾರ್ ಅವರು ಮೂರು ವಿಷಯಗಳಲ್ಲಿ ಶೇ. 100 ಅಂಕ ಪಡೆದಿದ್ದಾರೆ. ಖುಷಿ ಗಡಿಗೇಪ್ಪ ಚಿತ್ತರಗಿ ನಾಲ್ಕು ವಿಷಯಗಳಲ್ಲಿ ಶೇ.100 ಅಂಕ ಪಡೆದಿದ್ದಾರೆ.

    3 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 23 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 79 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಫಿಸಿಕ್ಸ್‌ನಲ್ಲಿ 79 ವಿದ್ಯಾರ್ಥಿಗಳು, ಕೆಮೆಸ್ಟ್ರಿ 21, ಬಯಾಲಜಿ 32, ಮ್ಯಾಥಮೆಟಿಕ್ಸ್ 236, ಸ್ಟಾಟಿಸ್ಟಿಕ್ಸ್ 16, ಕಂಪ್ಯೂಟರ್ ಸೈನ್ಸ್ 7, ಇಲೆಕ್ಟ್ರಾನಿಕ್ಸ್ 6, ಸಂಸ್ಕೃತ 37, ಕನ್ನಡ 3 ಮತ್ತು ಹಿಂದಿಯಲ್ಲಿ ಓರ್ವ ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ವರ್ಗ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ. ಪ್ರತಿವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ.

    ಬೊಸ್ಕೋಸ್ ಕಾಲೇಜು ಉತ್ತಮ ಫಲಿತಾಂಶ
    ಮಂಗಳೂರು: ಮಂಗಳೂರಿನ ಬೊಸ್ಕೋಸ್ ಪದವಿಪೂರ್ವ ಕಾಲೇಜು ಶೇ.98.2 ಫಲಿತಾಂಶ ಸಾಧಿಸಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೃಥ್ವಿ ಜೆ.ಕೆ. 592 ಅಂಕಗಳೊಂದಿಗೆ ರಾಜ್ಯದಲ್ಲಿ 5ನೇ ರ‌್ಯಾಂಕ್ ಹಾಗೂ ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
    ಒಟ್ಟು 111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 63 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 45 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೃಥ್ವಿ ಜೆ.ಕೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಸಂಸ್ಕೃತದಲ್ಲಿ ತಲಾ 100 ಅಂಕಗಳನ್ನು ಪಡೆದರೆ, ದೀಕ್ಷಾ ಪಿ.ಪೈ, ಸಂಸ್ಕೃತ, ಗಣಿತ ಮತ್ತು ಗಣಕ ವಿಜ್ಞಾನದಲ್ಲಿ 100 ತಲಾ 100 ಅಂಕಗಳನ್ನು ಪಡೆದಿದ್ದಾರೆ. ಪಲ್ಲವಿ, ಶಶಾಂಕ್ ಬಿ., ಶ್ರೀಯಾ ಸುದೇಶ್ ರಾವ್ 2 ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷೆ ಟಿ.ಏಜಿತಿನ್ ಬೊಸ್ಕೊ, ಟ್ರಸ್ಟಿ ಪ್ರೊ.ಎಸ್.ಎಸ್ ಬೊಸ್ಕೋ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
    * ಮೆಡಿಸಿನ್ ಓದುವ ಗುರಿ: ಒಟ್ಟು ಅಂಕ 590 ಬರಬಹುದು ಎಂದು ನಿರೀಕ್ಷೆ ಇತ್ತು. ನಿರೀಕ್ಷೆಗಿಂತ ಎರಡು ಅಂಕ ಹೆಚ್ಚು ಬಂದಿದ್ದು ಸಂತೋಷವಾಗಿದೆ ಎಂದು ಪೃಥ್ವಿ ಜೆ.ಕೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಮೆಡಿಸಿನ್ ಓದುವ ಗುರಿಯನ್ನು ಪೃಥ್ವಿ ಇಟ್ಟುಕೊಂಡಿದ್ದಾರೆ. ಅವರ ತಂದೆ ಡಾ.ಜೆ.ಕೇಶವಯ್ಯ ಶಿವಮೊಗ್ಗ ಕುವೆಂಪು ವಿವಿಯಲ್ಲಿ ಪ್ರೊಫೆಸರ್. ತಾಯಿ ಶೈಲಜಾ ಮಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿ.

    ಅಂಬಿಕಾ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
    ಪುತ್ತೂರು: ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಹೊಂದಿರುವ ಈ ಕಾಲೇಜು ದೇಶದಲ್ಲೇ ಅತ್ಯುತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಬಾರಿ ಒಟ್ಟು 208 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು ಶೇ.100 ಫಲಿತಾಂಶ ದಾಖಲಾಗಿದೆ.

    ಶಾರದಾ ಪಿಯು ಕಾಲೇಜಿಗೆ ಎರಡು ರ‌್ಯಾಂಕ್
    ಮಂಗಳೂರು: ಶಾರದಾ ಪಿ.ಯು ಕಾಲೇಜಿನ ಪೃಥ್ವಿ ಎನ್.ಹೆಬ್ಬಾರ್ ವಾಣಿಜ್ಯ ವಿಭಾಗದಲ್ಲಿ 5ನೇ ರ‌್ಯಾಂಕ್ (593) ಮತ್ತು ಅದಿತಿ ಪ್ರಭು ಕೆ.ಪಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 7ನೇ ರ‌್ಯಾಂಕ್ (590 ಅಂಕ) ಪಡೆದಿದ್ದಾರೆ. ಪೃಥ್ವಿ ಹೆಬ್ಬಾರ್ ರಾಜ್ಯಕ್ಕೆ 10ರ ಒಳಗೆ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಮನೆಯವರು 5ರ ಒಳಗೆ ಸ್ಥಾನ ಪಡೆಯಬೇಕು ಎನ್ನುತ್ತಿದ್ದರು. ಈಗ ಹೆತ್ತವರ ಆಸೆ ಈಡೇರಿದೆ. ಪೃಥ್ವಿ ಸಿಎ ಓದುವ ಆಶಯ ಇಟ್ಟುಕೊಂಡಿದ್ದಾರೆ. ಪೃಥ್ವಿ ತಂದೆ ನಾಗರಾಜ ಆರ್.ಹೆಬ್ಬಾರ್ ಕರ್ಣಾಟಕ ಬ್ಯಾಂಕ್ ನಿವೃತ್ತ ಎಜಿಎಂ. ತಾಯಿ ಉಷಾ ಹೆಬ್ಬಾರ್ ದೇರೆಬೈಲ್‌ನಲ್ಲಿ ಕರ್ಣಾಟಕ ಬ್ಯಾಂಕ್ ಸೀನಿಯರ್ ಬ್ರಾೃಂಚ್ ಮ್ಯಾನೇಜರ್.
    ಅದಿತಿ ಪ್ರಭು ಕೆ.ಪಿ ಅವರಿಗೆ ಮುಂದೆ ಇಂಜಿನಿಯರಿಂಗ್(ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ಸ್) ಓದುವ ಆಸೆ. ಶೇ.95ಕ್ಕಿಂತ ಅಧಿಕ ಅಂಕ ಬರಬಹುದು ಎನ್ನುವ ನಿರೀಕ್ಷೆ ಇತ್ತು. ರಾಜ್ಯಮಟ್ಟದ ಸಾಧನೆಯ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಫಲಿತಾಂಶದಿಂದ ಸಂತೋಷವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅದಿತಿ ಶಿಕ್ಷಣ ಜತೆ ಬ್ಯಾಡ್ಮಿಂಟನ್ ಕ್ರೀಡೆ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಮಗಳಿಗೆ ಈ ಸಾಧನೆ ಸಾಧನೆ ಸಾಧ್ಯವಾಗಿದೆ ಎಂದು ಆಕೆಯ ತಾಯಿ ಉಷಾ ಅನಿಲ್ ಪ್ರಭು ಸಂತೋಷ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ಅದಿತಿ ತಂದೆ ಅನಿಲ್ ಪ್ರಭು ಕುವೈಟ್‌ನಲ್ಲಿ ಆಲಿ ಯುನೈಟೆಡ್ ಬ್ಯಾಂಕ್ ಉದ್ಯೋಗಿ.

    ಮೂಡುಬಿದಿರೆ: ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿಗೆ ಶೇ.99.79 ಫಲಿತಾಂಶ ಲಭಿಸಿದೆ.
    ವಿಜ್ಞಾನ ವಿಭಾಗ ವಿದ್ಯಾರ್ಥಿಗಳಾದ ವಿವೇಕ್ ಎ.ಬಿ. ಮತ್ತು ಚೇತನ್ ಕೆ.ಸಿ. ತಲಾ 591 ಅಂಕ ಗಳಿಸಿ ಕಾಲೇಜಿಗೆ ಮೊದಲ ಹಾಗೂ ರಾಜ್ಯಮಟ್ಟದಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಪ್ರಗತಿ ಕೆ.ಎಸ್ 590 ಗಳಿಸಿ ಕಾಲೇಜಿನಲ್ಲಿ ದ್ವಿತೀಯ ಹಾಗೂ ರಾಜ್ಯಮಟ್ಟದಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅನೀಶ್(586), ಸಿಂಚನಾ(583), ಸಹನಾ ಶ್ರೀಶೈಲ್ ಪಾಟೀಲ್(583), ಗೌರಿ ವೈ(583), ಅಕ್ಷಯ್ ಪ್ರಭಾಕರ್ ಭಾಗವತ್(582), ಮದನ್ ವೈ.ಎನ್(581), ಸಂದೇಶ್ ಲೋಕೇಶ್ ಕೊಟಾರಿ(581), ರಾಕೇಶ್ ಜಿ.ಬಿ.(581) ಹಾಗೂ ಶ್ರೀ ನಿಧಿ ಶೆಟ್ಟಿ(580), ವಾಣಿಜ್ಯ ವಿಭಾಗದಲ್ಲಿ ಹೃದಯ್ ಆರ್.(586), ವಿನ್ಸ್‌ಟನ್(583) ಹಾಗೂ ಶರತ್(580) 580ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ.
    ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಲಭಿಸಿದ್ದು, ಅಭಿಜಿತ್ ರಾಜೇಂದ್ರ ಜೋಷಿ 589 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾರೆ.
    ಕಾಲೇಜಿನಿಂದ ಹಾಜರಾಗಿದ್ದ 281 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 189 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 46 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 93 ವಿದ್ಯಾರ್ಥಿಗಳು ವಿಷಯವಾರು ಶೇ.100 ಅಂಕ ಗಳಿಸಿದ್ದಾರೆ. ಎಕ್ಸಲೆಂಟ್ ವಿದ್ಯಾಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts