More

    ರಂಜಾನ್ ಸಂಭ್ರಮ ಕಸಿದುಕೊಂಡ ಕರೊನಾ

    ಕೊಡೇಕಲ್: ಪವಿತ್ರ ರಂಜಾನ್ ಹಬ್ಬವನ್ನು ಈ ವರ್ಷ ಕೋವಿಡ್-19 ಕಾರಣದಿಂದ ಕೊಡೇಕಲ್ ಹೋಬಳಿ ವಲಯದ ನಾರಾಯಣಪುರ, ರಾಜನಕೋಳೂರ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿದರು.

    ಯಾದಗಿರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು ಎಲ್ಲೆಡೆ ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ ವಿವಿಧೆಡೆ ಮುಸ್ಲಿಂ ಬಾಂಧವರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಕರೊನಾ ಹೋಗಲಾಡಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.

    ಈ ಕುರಿತು ಪ್ರತಿಕೆಯೊಂದಿಗೆ ಮಾತನಾಡಿದ ಗ್ರಾಮದ ಮುಸ್ಲಿಂ ಸಮಾಜದ ಮುಖಂಡ ಇಬ್ರಾಹಿಂಸಾಬ್ ಘಾಟೆ, ಇಡೀ ಜಗತ್ತಿನಲ್ಲಿ ಕರಾಳ ಮುಖವನ್ನು ತೋರಿಸುತ್ತಿರುವ ಕರೊನಾ ಇದೀಗ ನಮ್ಮ ಜಿಲ್ಲೆಗೂ ಬಂದಿದ್ದು ಯಾರನ್ನು ನಾವು ದೋಷಣೆ ಮಾಡಬಾರದು. ಸೋಂಕಿತರನ್ನು ಕೆಟ್ಟ ದೃಷ್ಟಿಯಿಂದ ನೋಡದೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುವುದರ ಜತೆಗೆ ಕರೊನಾ ವಿರುದ್ಧ ನಾವೆಲ್ಲ ಹೋರಾಡೋಣ ಹಾಗೂ ಸಕರ್ಾರದ ಆದೇಶವನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts