More

    ಪ್ರಾತಿನಿಧ್ಯ ಸಿಗದಿದ್ರೆ ಬಿಲ್ಲವ ಜನಜಾಗೃತಿ ಯಾತ್ರೆ

    ಮಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಂಗ್ರೆಸ್ ಇಲ್ಲಿಯ ತನಕ ಬಿಲ್ಲವ ಸಮಾಜದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ. ಸಮಾಜದ ಇನ್ನೊಬ್ಬರಿಗೆ ಟಿಕೆಟ್ ನೀಡದಿದ್ದರೆ ಏ.26ರಂದು ಬಂಟ್ವಾಳದಿಂದ ಕುದ್ರೋಳಿಯ ತನಕ ಹಾಗೂ ಕುದ್ರೋಳಿಯಿಂದ ಉಳ್ಳಾಲದ ತನಕ ಬಿಲ್ಲವ ಜನಜಾಗೃತಿ ಯಾತ್ರೆ ನಡೆಸಲಾಗುವುದು ಎಂದು ನಾರಾಯಣಗುರು ಶಕ್ತಿ ಪೀಠದ ಅಧ್ಯಕ್ಷ ಪ್ರಣಾವನಂದ ಸ್ವಾಮೀಜಿ ಹೇಳಿದ್ದಾರೆ.

    ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕನಿಷ್ಠ ಎರಡು ಸೀಟುಗಳನ್ನಾದರೂ ಕೊಡಬೇಕು. ಬಿಜೆಪಿಯಲ್ಲಿ 2 ಟಿಕೆಟ್ ನೀಡಿದ್ದಾರೆ. ಸಮಾಜದ ಹೆಣ್ಮಕ್ಕಳಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಇನ್ನೂ ಮಂಗಳೂರು ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿಲ್ಲ. ಆದುದರಿಂದ ಅಲ್ಲಿ ಬಿಲ್ಲವರಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯಿಂದ 8 ಮಂದಿ 2 ಲಕ್ಷ ರೂ. ಹಣ ಕಟ್ಟಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆರ್.ಪದ್ಮರಾಜ್ ಹಣ ಕಟ್ಟದಿದ್ದರೂ ಆಕಾಂಕ್ಷಿಯಾಗಿ ದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲೋಕಸಭಾ ಅಭ್ಯರ್ಥಿ ಯಾಗಿ ಬಿಲ್ಲವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲಿದ್ದೇವೆ ಎಂದರು. ಅಗತ್ಯ ಕೆಲಸವೊಂದಕ್ಕೆ ಭೇಟಿಯಾಗಿದ್ದ ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಅವರನ್ನು ಶಾಸಕ ವೇದವ್ಯಾಸ ಕಾಮತ್ ಅವಮಾನಿಸಿದ್ದಾರೆ. ಇದನ್ನು ನಾರಾಯಣಗುರು ಶಕ್ತಿ ಪೀಠ ಖಂಡಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts