More

    ಕೃಷ್ಣನ ನಾಡನ್ನು ಪ್ರಶಂಸಿಸಿದ್ದ ಪ್ರಣಬ್

    ಉಡುಪಿ: ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದಾಗ (2017 ಜೂ.18) ಉಡುಪಿಗೆ ಭೇಟಿ ನೀಡಿದ್ದರು. ಅದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪಂಚಮ ಪರ್ಯಾಯ ಅವಧಿಯಾಗಿತ್ತು.

    ಅಂದು ಕೃಷ್ಣ ಮಠದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ದೇವಸ್ಥಾನಗಳ ನಗರ ಉಡುಪಿಗೆ ಭೇಟಿ ನೀಡಿ, ಅಷ್ಟ ಮಠಾಧೀಶರ ಆಶಿರ್ವಾದ ಪಡೆದಿರುವುದು ಸಂತೋಷವಾಗಿದೆ. ಇದು ಅಭಿವೃದ್ಧಿಶೀಲ ಚಿಂತನೆಯ ಊರು. ದೇವಸ್ಥಾನ, ಆಸ್ಪತ್ರೆ ಸೇವಾ ಕೇಂದ್ರಗಳಿರುವ ಈ ನಾಡು ಪವಿತ್ರ ತಾಣ ಎಂದು ಎಂದು ಬಣ್ಣಿಸಿದ್ದರು.

    ರಾಷ್ಟ್ರಪತಿಗಳ ಭೇಟಿ, ಜಿಲ್ಲೆಯ ಜನತೆಗೂ ಅವಿಸ್ಮರಣಿಯ ಕ್ಷಣವಾಗಿತ್ತು. 18ರಂದು ಶ್ರೀಕೃಷ್ಣ ಮಠ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೂ ಅವರು ಭೇಟಿ ನೀಡಿದ್ದರು. ಅಂದು ಅವರು ಉಡುಪಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ ಬನ್ನಂಜೆ ಪ್ರವಾಸಿ ಮಂದಿರಕ್ಕೆ ಆಗಮಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಬಳಿಕ ಕೃಷ್ಣಮಠಕ್ಕೆ ತೆರಳಿದ್ದರು. ಕೃಷ್ಣ ದೇವರ ದರ್ಶನ ಪಡೆದು ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪೇಜಾವರ ಶ್ರೀಗಳು, ಅವರಿಗೆ ಕೃಷ್ಣನ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಿ, ಶಾಲು ಹೊದಿಸಿ ಆಶೀರ್ವದಿಸಿದ್ದರು.

    ಅಂದು ಅಷ್ಟ ಮಠದ ಯತಿಗಳೊಂದಿಗೆ ಕೆಲವು ಸಮಯ ಔಪಚಾರಿಕ ಮಾತುಕತೆ ನಡೆಸಿ, ಬಳಿಕ ಕೃಷ್ಣಮಠ ರಾಜಾಂಗಣದಲ್ಲಿ ಬಿಆರ್‌ಎಸ್ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. 19ರಂದು ಶ್ರೀ ಕ್ಷೇತ್ರ ಕೊಲ್ಲೂರಿಗೆ ಭೇಟಿ ನೀಡಿ ಮೂಕಾಂಬಿಕೆ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.
    ಉಡುಪಿ ಮಠಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿಗಳ ಪೈಕಿ ಪ್ರಣಬ್ ಮೂರನೆಯವರು. ಇದಕ್ಕೂ ಮೊದಲು ಜೈಲ್ ಸಿಂಗ್, ಶಂಕರದಯಾಳ್ ಶರ್ಮ ಭೇಟಿ ನೀಡಿದ್ದರು. ವಿತ್ತ ಸಚಿವರಾಗಿದ್ದ ಸಂದರ್ಭ, ಮಣಿಪಾಲ ವಿವಿಗೂ ಭೇಟಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts