More

  ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್​ ಮನಗೆ ಬಂತು ಶಂಕಾಸ್ಪದ ಪತ್ರ: ಅದರಲ್ಲಿದೆ ಪೌಡರ್​ ರೀತಿಯ ಪದಾರ್ಥ

  ನವದೆಹಲಿ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್​ ಅವರ ಮಧ್ಯಪ್ರದೇಶದ ಭೂಪಾಲ್​ ನಿವಾಸಕ್ಕೆ ಶಂಕಾಸ್ಪದ ಪತ್ರವೊಂದನ್ನು ಕಳುಹಿಸಲಾಗಿದ್ದು, ಪತ್ರದಲ್ಲಿ ಪೌಡರ್​ ರೀತಿಯ ಪದಾರ್ಥ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  ಪೊಲೀಸ್​ ಮೂಲಗಳ ಪ್ರಕಾರ ಪತ್ರದ ಮೇಲೆ ಉರ್ದು ಭಾಷೆಯಲ್ಲಿ ಬರೆಯಲಾಗಿದ್ದು, ಇನ್ನಿತರ ಪತ್ರಗಳನ್ನು ಅದರೊಳಗೆ ಸೇರಿಸಿ ಕಳುಹಿಸಲಾಗಿದೆ.

  ಈ ಬಗ್ಗೆ ಮಾತನಾಡಿರುವ ಠಾಕೂರ್, ಇಂತಹ ಪತ್ರಗಳನ್ನು ಈ ಮುಂಚೆಯೂ ನಾನು ಸ್ವೀಕರಿಸಿದ್ದೇನೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಆದರೆ, ಅವರು ಯಾವುದೇ ಕ್ರಮಕೈಗೊಂಡಿಲ್ಲ. ಇದೊಂದು ದೇಶ ವಿರೋಧಿಗಳ ದೊಡ್ಡ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

  ಠಾಕೂರ್​ ಮನೆಯಲ್ಲಿದ್ದ ಮೂರರಿಂದ ನಾಲ್ಕು ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪತ್ರಗಳನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಮಾಧ್ಯಮಗೊಂದಿಗೆ ಮಾತನಾಡಿರುವ ಭೂಪಾಲ್​ ಡಿಐಜಿ ಇರ್ಷಾದ್​ ವಾಲಿ, ನಾವು ಸಂಸದೆಯಿಂದ ದೂರು ಸ್ವೀಕರಿಸಿದ್ದೇವೆ. ಪತ್ರದೊಳಗೆ ಕೆಲ ಹಾನಿಕಾರಕ ಕೆಮಿಕಲ್ಸ್​ ಇದ್ದವು ಎಂದು ಠಾಕೂರ್​ ಆರೋಪ ಮಾಡಿದ್ದಾರೆ. ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  ಇದಲ್ಲದೆ, ಠಾಕೂರ್​ ವಿಳಾಸ ಇರುವ ಕಂದು ಬಣ್ಣದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ರವು ಕೆಲ ವಿಷಕಾರಿ ಪದಾರ್ಥಗಳನ್ನು ಹೊಂದಿವೆ ಎಂದು ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಪರೀಕ್ಷೆಗಾಗಿ ಪತ್ರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts