More

    ಪ್ರಗುಣಿಯಲ್ಲಿ ಶಾರ್ಟ್​ ಫಿಲ್ಮ್​ ಫೆಸ್ಟಿವಲ್​

    ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಓವರ್​ ದಿ ಟಾಪ್​ (ಓಟಿಟಿ)ಗಳು ಪ್ರಾರಂಭವಾಗಿದ್ದು, ಈ ಪೈಕಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಗುಣಿ ಎಂಬ ಹೊಸ ಓಟಿಟಿ (www.praguni.com) ಪ್ರಾರಂಭವಾಗಿದೆ. ಟಿ.ಎನ್​. ಸೀತಾರಾಮ್​ ಮತ್ತು ಪವನಕುಮಾರ್​ ಮಾನ್ವಿ ಮಾರ್ಗದರ್ಶನದಲ್ಲಿ ಶುರುವಾಗಿರುವ ಪ್ರಗುಣಿ, ಕನ್ನಡದ ಸಾರ್ವಭೌಮತ್ವವನ್ನು ದೃಶ್ಯ ಮಾಧ್ಯಮದಲ್ಲಿ ಪ್ರತಿಷ್ಠಾಪಿಸಿಲು ಸಜ್ಜಾಗಿದೆ.

    ಇದನ್ನೂ ಓದಿ: ಜೀ಼ ಕನ್ನಡದಲ್ಲಿ ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಧಾರಾವಾಹಿಗಳ ಮಹಾಸಂಗಮ

    ಈ ಪೈಕಿ ಪ್ರಗುಣಿಯಲ್ಲಿ ಸದ್ಯದಲ್ಲೇ ಕಿರುಚಿತ್ರೋತ್ಸವ ಪ್ರಾರಂಭವಾಗಲಿದೆ. ಧಾರಾವಾಹಿಯಂತೆ ಎಳೆಯದೇ, ಹೇಳಬೇಕಾದುದನ್ನು ನೇರವಾಗಿ, ಸ್ಪಷ್ಟವಾಗಿ ಮತ್ತು ಸ್ವಂತಿಕೆಯಿಂದ ಜನಮನವನ್ನು ತಲುಪುವ ಕಿರುಚಿತ್ರಗಳ ಒಂದು ಉತ್ಸವವನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲಾ ಮೂಲೆಗಳಿಂದಲೂ 45 ನಿಮಿಷಗಳ ಅವಧಿಗೆ ಮೀರದಂತೆ ಕಿರುಚಿತ್ರಗಳನ್ನು ಆಹ್ವಾನಿಸಿದ್ದು, ಯಾರು ಬೇಕಾದರೂ ಈ ಕಿರುಚಿತ್ರೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

    ಈ ಚಿತ್ರೋತ್ಸವದಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡುವುದಕ್ಕೆ ಟಿ.ಎನ್​. ಸೀತಾರಾಮ್​, ಪಿ. ಶೇಷಾದ್ರಿ, ಜಿ.ಎಸ್​. ಭಾಸ್ಕರ್​, ಗಿರೀಶ್​ ರಾವ್ ಹತ್ವಾರ್​ (ಜೋಗಿ), ವಿ. ಮನೋಹರ್​ ಮತ್ತು ಬಿ.ಯು. ಗೀತಾ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸ್ಪರ್ಧೆಗೆ ಬರುವ ಕಿರುಚಿತ್ರಗಳನ್ನು ಉತ್ಸವದ ಮಾದರಿಯಲ್ಲಿ ಸತತವಾಗಿ 90 ದಿನಗಳ ಕಾಲ ಪ್ರಸಾರ ಮಾಡಲಾಗುವುದರಿಂದ, ಅಷ್ಟೂ ದಿನಗಳ ಕಾಲ ಎಲ್ಲರೂ ಅದನ್ನು ವೀಕ್ಷಿಸಬಹುದು ಮತ್ತು ವಸ್ತುನಿಷ್ಟವಾಗಿಸಬಹುದು. ಹೀಗೆ ಎಲ್ಲರೂ ವೀಕ್ಷಿಸಿದ ಕಿರುಚಿತ್ರ ಸರಣಿಯಲ್ಲಿ ಅಪರೂಪದ ಚಿತ್ರಕ್ಕೆ ಜ್ಯೂರಿಗಳ ವಿಶೇಷ ಬಹುಮಾನವಿದೆ. ಅಲ್ಲದೆ ನಗದು ಬಹುಮಾನದ ಪುರಸ್ಕಾರವೂ ಸಿಗಲಿದೆ.

    ಇದನ್ನೂ ಓದಿ: ಸತ್ಯನಾಗಿ ಬದಲಾದಾಗ … ಸಂತೋಷ್​ ಕನಸು ಇದೀಗ ನನಸು

    ಗುರುಪ್ರಸಾದ್​ ಮುದ್ರಾಡಿ, ಪ್ರಸನ್ನ ಮಧ್ಯಸ್ಥ, ನಿತ್ಯಾನಂದ ಭಟ್​ ಮತ್ತು ಸಾತ್ವಿಕ್​ ಚಕ್ರವರ್ತಿ ಈ ಓಟಿಟಿಯ ಹಿಂದಿದ್ದಾರೆ.

    ಸಮಂತಾ ಅಕ್ಕಿನೇನಿ ತೊಟ್ಟ ಈ ಸೀರೆ ಬೆಲೆ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts