More

    ಕೃಷಿಗಾಗಿ ಪ್ರಧಾನ ಮಂತ್ರಿ ಸಮೃದ್ಧಿ ಕೇಂದ್ರ ಕೆಲಸ

    ಶಿರಸಿ: ಜನರ ಆರೋಗ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದಂತೆ ಕೃಷಿಯ ಆರೋಗ್ಯಕ್ಕೆ ಪ್ರಧಾನ ಮಂತ್ರಿ ಸಮೃದ್ಧಿ ಕೇಂದ್ರ ಕೆಲಸ ಮಾಡಲಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ತಾಲೂಕಿನ ಯಡಹಳ್ಳಿಯ ಕಾನಗೋಡ ಗ್ರುಪ್ ಸೇವಾ ಸಹಕಾರಿ ಸಂಘದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಕೃಷಿ ಸಮೃದ್ಧಿ ಕೇಂದ್ರ ಉದ್ಘಾಟನೆ ವರ್ಚುವಲ್ ವೀಕ್ಷಣೆ ಬಳಿಕ ಅವರು ಮಾತನಾಡಿದರು.

    ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನ ಎಲ್ಲ ರೈತರು ಪಡೆಯಬೇಕು. ಕೃಷಿಯಲ್ಲಿ ಸ್ವಾವಲಂಬನೆ ಆಗಲು ಇಂಥ ಕೇಂದ್ರಗಳು ಸಹಕಾರಿ ಆಗುತ್ತವೆ. ಈ ಕೇಂದ್ರಕ್ಕೆ ಆಯ್ಕೆ ಆದ ಸೊಸೈಟಿಗಳು ಮಾಹಿತಿಗಳ ಪ್ರಚಾರ ಕೊಡಬೇಕು ಎಂದರು.

    ಕೃಷಿ ಸಮೃದ್ಧಿ ಕೇಂದ್ರಗಳು ರೈತರ ಏಕಗವಾಕ್ಷಿ ಯೋಜನೆಯಂತೆ ಕೆಲಸ ಮಾಡುತ್ತದೆ. ರಸಗೊಬ್ಬರ, ಯಂತ್ರೋಪಕರಣ, ಸರ್ಕಾರದ ಯೋಜನೆಗಳ ತನಕ ಮಾಹಿತಿ ಒಂದೇ ಸೂರಿನಲ್ಲಿ ಸಿಗಲಿದೆ. ರೈತರನ್ನು ಕೇಂದ್ರೀಕರಿಸಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ೕ ಯೋಜನೆ ಜಾರಿಗೆ ತಂದಿದ್ದಾರೆ.

    ಇಂಥ ರೈತ ಸಮೃದ್ಧಿ ಕೇಂದ್ರಗಳನ್ನು 1.25ಲಕ್ಷ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲೂ 20ಕ್ಕಿಂತ ಹೆಚ್ಚು ಇಂಥ ಕೇಂದ್ರಗಳು ಕಾರ್ಯ ಆರಂಭಿಸಿವೆ. ಶಿರಸಿಯಲ್ಲಿ 6 ಕೇಂದ್ರಗಳಿವೆ ಎಂದರು.

    ಕೃಷಿ ಅಧಿಕಾರಿ ನಟರಾಜ್ ಅವರು ಕೃಷಿ ಸಮೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದರು.

    ಪ್ರಮುಖರಾದ ಆರ್.ಡಿ. ಹೆಗಡೆ, ಚಂದ್ರು ಎಸಳೆ, ಗುರುಪ್ರಸಾದ ಹರ್ತೆಬೈಲ್, ಉಷಾ ಹೆಗಡೆ, ನರಸಿಂಹ ಬಕ್ಕಳ, ರವಿ ಹಳದೋಟ, ಎಂ.ವಿ.ಹೆಗಡೆ ಕಾನಗೋಡ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಟಿಆರ್​ಸಿ ನಿರ್ದೇಶಕ ಆರ್.ವಿ. ಹೆಗಡೆಚಿಪಗಿ, ಸೊಸೈಟಿ ಉಪಾಧ್ಯಕ್ಷ ಶ್ರೀಪತಿ ಭಟ್ಟ ಬೂದಿಮುರಡು, ಇತರ ನಿರ್ದೇಶಕರು ಇತರರು ಇದ್ದರು. ಯಡಹಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts