More

    ಪ್ರಾಯೋಗಿಕ ಜ್ಞಾನ ಹೆಚ್ಚಿಸುವ ಶೈಕ್ಷಣಿಕ ಪ್ರವಾಸ

    ಅಳವಂಡಿ:ಮಕ್ಕಳ ಪ್ರಾಯೋಗಿಕ ಕಲಿಕೆಗೆ ಶೈಕ್ಷಣಿಕ ಪ್ರವಾಸ ಸಹಕಾರಿಯಾಗಲಿದೆ. ಪಠ್ಯದ ವಿಷಯಗಳನ್ನು ಖುದ್ದು ವೀಕ್ಷಣೆ ಮಾಡುವುದರಿಂದ ಅಭ್ಯಾಸ ಮನವರಿಕೆಯಾಗಲಿದ್ದು. ಮಕ್ಕಳು ಪ್ರವಾಸದ ಉಪಯೋಗ ಪಡೆದುಕೊಳ್ಳಬೇಕೆಂದು ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ತಿಳಿಸಿದರು.

    ಇದನ್ನೂ ಓದಿ:http://ಪ್ರಾಯೋಗಿಕ ಜ್ಞಾನ ಹೆಚ್ಚಿಸುವ ಶೈಕ್ಷಣಿಕ ಪ್ರವಾಸ

    ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಮಂಗಳವಾರ ಮಾದರಿ ಶಾಲಾ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ಕು ಗೋಡೆಯ ಮಧ್ಯ ಪಾಠ ಪ್ರವಚನ ಕೇಳಿದ ಮಕ್ಕಳಿಗೆ ಪ್ರವಾಸ ಒಂದು ನೂತನ ಅನುಭವ ಹಾಗೂ ಜ್ಞಾನ ನೀಡಲಿದೆ.

    ಮನಸ್ಸಿನ ಗೊಂದಲ ದೂರಮಾಡಿ ಉಲ್ಲಾಸ, ಉತ್ಸಾಹ, ಹಾಗೂ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹಿಸಲಿದೆ. ಪ್ರಾಯೋಗಿಕ ಜ್ಞಾನವು ಸೈದ್ಧಾಂತಿಕಕ್ಕಿಂತ ಹೆಚ್ಚು ಅವಶ್ಯ ಮತ್ತು ಪರಿಣಾಮಕಾರಿ ಎಂದರು.

    ಎಸ್ಡಿಎಂಸಿ ಅಧ್ಯಕ್ಷ ರಮೇಶ ಬನ್ನಿಕೊಪ್ಪ ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕ ಪ್ರವಾಸದಿಂದ ವಿವಿಧ ಭಾಷೆ, ಜನರ ನಾಗರಿಕತೆ ಪರಿಚಯವಾಗುತ್ತದೆ. ಜತೆಗೆ ಒತ್ತಡಮುಕ್ತ ಓದಿನಿಂದ ಕೆಲ ಕಾಲ ಉತ್ಸಾಹ, ಓದಿಗೆ ಸಹಕಾರ, ಪ್ರಾಯೋಗಿಕ ಜ್ಞಾನ ದೊರೆಯಲಿದೆ ಎಂದರು. ಶಿಕ್ಷಕರಾದ ರಾಜೇಸಾಬ್, ಪ್ರಕಾಶ ರಡ್ಡಿ, ಶಿರಸಪ್ಪ ಗಡಾದ, ನಿರ್ಮಲಾ, ಸುಷ್ಮಾ, ಶ್ವೇತಾ, ಸುರೇಶ, ತುಕಾರಾಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts