More

    ಪಶು ಸಂಗೋಪನೆ ಸಚಿವ ಚವ್ಹಾಣ್​ಗೆ ತಗುಲಿದ ಕರೊನಾ ಸೋಂಕು

    ಬೀದರ್​: ಪಶು ಸಂಗೋಪನೆ, ಹಜ್, ವಕ್ಫ್ ಮತ್ತು ಬೀದರ್-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರಿಗೆ ಕರೊನಾ ಪಾಸಿಟಿವ್ ಬಂದಿದೆ.

    ಕರೊನಾ ನಿಯಂತ್ರಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಸಂಬಂಧ ಸಚಿವ ಚವ್ಹಾಣ್ ಅವರು ಕಳೆದೈದು ತಿಂಗಳಿಂದ ನಿರಂತರ ಸಂಚರಿಸುತ್ತಿದ್ದಾರೆ. ಜಿಲ್ಲೆಯಲ್ಲದೇ ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸರಣಿ ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಯಾರದೋ ಸೋಂಕಿತರ ಸಂಪರ್ಕದಿಂದ ಇವರಿಗೆ ಗುರುವಾರ ಸೋಂಕು ದೃಢಪಟ್ಟಿದೆ.

    ಇದನ್ನೂ ಓದಿ: ಒಂದು ದಾಖಲೆಗಾಗಿ ಕೋಟಿ ರೂ. ಲಂಚ: 5 ಎಕರೆ ಜಮೀನು, 8 ಖಾಲಿ ಚೆಕ್, ಸರ್ಕಾರಿ ನೌಕರರ ಲಂಚಾವತಾರ ಬಯಲು!

    ಸಚಿವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಮೂರು ದಿನಗಳ ಹಿಂದಷ್ಟೇ ಪಾಸಿಟಿವ್ ಬಂದಿತ್ತು. ಹೀಗಾಗಿ ಸಚಿವರು ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದರು. ಬುಧವಾರ ಸಚಿವರು ಸ್ವತಃ ವೈದ್ಯರನ್ನು ಕರೆಸಿ ಪರೀಕ್ಷಿಸಿಕೊಂಡಾಗ ಸೋಂಕು ಧೃಢಪಟ್ಟಿದೆ. ಇವರೊಂದಿಗೆ ಅವರ ಅಣ್ಣನ ಮಗ ದಿಲೀಪ್ ಚವ್ಹಾಣ್ ಅವರಿಗೂ ಸೋಂಕು ಧೃಢಪಟ್ಟಿದೆ.

    ಬ್ರಿಮ್ಸ್ ವೈದ್ಯರ ಸಲಹೆಯಂತೆ ಸಚಿವರು ಸದ್ಯ ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರಿಗೆ ಸ್ವಲ್ಪ ಕೆಮ್ಮು ಇದೆ. ಹೀಗಾಗಿ ಚೆಸ್ಟ್ ಸ್ಕ್ಯಾನಿಂಗ್ ಸೇರಿದಂತೆ ಮುಂಜಾಗ್ರತಾ ಕ್ರಮವಾಗಿ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಮುಂಜಾಗರಕೂತೆ ವಹಿಸಬೇಕೆಂದು ಸಚಿವರು ಕೋರಿದ್ದಾರೆ.

    VIDEO| ರಫೇಲ್​ ವಾಯುಪಡೆ ಸೇರ್ಪಡೆಗೆ ಕ್ಷಣಗಣನೆ: ದೆಹಲಿಗೆ ಬಂದಿಳಿದ ಫ್ರಾನ್ಸ್​ ರಕ್ಷಣಾ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts