More

    ಸಲಾರ್‌ ಸಿನಿಮಾದ ಬಿಗ್‌ ಅಪ್ಡೇಟ್‌; ಚಿಕ್ಕ ವಯಸ್ಸಿನ ಹಿರೋಯಿನ್​​​ ಒಬ್ಬರಿಗೆ ಸ್ಪೆಷಲ್​ ಸಾಂಗ್​​​, ಯಾರೀ ನಟಿ..?!

    ಭಾರೀ ನಿರೀಕ್ಷೆಗಳ ನಡುವೆ ಬರುತ್ತಿರುವ ಸಲಾರ್​​ ಸಿನಿಮಾದ ಹೊಸ ಅಪ್ಡೇಟ್​​​ ಒಂದು ಹೊರ ಬಿದ್ದಿದೆ. ಸದ್ಯ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.


    ಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ ಇದಾಗಿದ್ದು, ಈ ಚಿತ್ರವನ್ನ ಕೆಜಿಎಫ್​ ನಿರ್ದೇಶಕ ಪ್ರಶಾಂತ್​​ ನೀಲ್​​ ನಿರ್ದೇಶಿಸಿದ್ದಾರೆ.


    ಡಿಸೆಂಬರ್ 22, 2023 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.


    ಸಲಾರ್​​ ಚಿತ್ರದ ಕುರಿತಂತೆ ಪ್ರತಿ ದಿನ ಅಪ್ಡೇಟ್ ವೈರಲ್ ಆಗುತ್ತಿದ್ದು, ಸದ್ಯದಲ್ಲೇ ಈ ಸಿನಿಮಾದ ಪ್ರಮೋಷನ್ ಶುರುವಾಗಲಿದೆಯಂತೆ.. ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ಇಂಟರೆಸ್ಟಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ.

    ಈ ಹಾಡಿನಲ್ಲಿ ಯುವ ನಾಯಕಿ ಹಾಗೂ ಇತ್ತೀಚೆಗೆ ಗದರ್ 2 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದ ಸಿಮ್ರತ್ ಕೌರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯೂ ಇದೆ.

    ಮತ್ತೊಂದೆಡೆ ಕಾಲಿನ ಶಸ್ತ್ರಚಿಕಿತ್ಸೆಗಾಗಿ ಇಟಲಿಗೆ ಹೋಗಿದ್ದ ಪ್ರಭಾಸ್ ಕೂಡ ಇತ್ತೀಚೆಗಷ್ಟೇ ವಾಪಸಾದರು.. ಸದ್ಯದಲ್ಲೇ ಡಾರ್ಲಿಂಗ್ ಸಿನಿಮಾ ಪ್ರಚಾರದಲ್ಲೂ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts