More

    ‘ಅಪ್ಪು’ ಆಗಮಿಸಿ ಇಂದಿಗೆ 18 ವರ್ಷಗಳಾಯ್ತು..

    ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಾಯಕನಟನಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ ಇಂದಿಗೆ ಬರೋಬ್ಬರಿ 18 ವರ್ಷಗಳಾದವು. ‘ಅಪ್ಪು’ ಚಿತ್ರದ ಮೂಲಕ ಆಗಮಿಸಿದ ಪುನೀತ್ ರಾಜ್​ಕುಮಾರ್​, ಮೊದಲ ಸಿನಿಮಾ ಮೂಲಕವೇ ದಾಖಲೆ ಬರೆದರು. ಅಷ್ಟೇ ಅಲ್ಲ ಆ ಸಿನಿಮಾ ಶತದಿನೋತ್ಸವವನ್ನೂ ಕಂಡು ಸೂಪರ್​ ಹಿಟ್​ ಆಗಿದ್ದು ಇದೀಗ ಇತಿಹಾಸ.
    1976 ಪ್ರೇಮದ ಕಾಣಿಕೆ ಮೂಲಕ ಬಾಲ ನಟನಾಗಿ ಸಿನಿಮಾ ಪ್ರವೇಶಿಸಿದ್ದರೂ, ಅಲ್ಲಿಂದ 1989ರವರೆಗೆ 14 ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅದಾಗಿ ಸುದೀರ್ಘ 12 ವರ್ಷದ ಗ್ಯಾಪ್​ ಬಳಿಕ, ಅಪ್ಪು ಅವತಾರದಲ್ಲಿ ಪುನೀತ್​ ಎದುರಾದರು. ವಜ್ರೇಶ್ವರಿ ಕಂಬೈನ್ಸ್​ನಲ್ಲಿ ಮೂಡಿಬಂದ ಸಿನಿಮಾಕ್ಕೆ ಪುರಿ ಜಗನ್ನಾಥ್​ ಆ್ಯಕ್ಷನ್​ ಕಟ್​ ಹೇಳಿದ್ದರು. ಪುನೀತ್​ ಜತೆಗೆ ನಟಿ ರಕ್ಷಿತಾ ಸಹ ಅಪ್ಪು ಮೂಲಕ ಚಂದನವನ ಪ್ರವೇಶಿಸಿ, ದಕ್ಷಿಣ ಭಾರತದ ಸಿನಿಮಾರಂಗದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು ರಕ್ಷಿತಾ.
    ಇಷ್ಟೆಲ್ಲ ದಾಖಲೆಗಳಿಗೆ ಕಾರಣವಾದ ಈ ಸಿನಿಮಾ ಇಂದಿಗೆ ಬಿಡುಗಡೆ ಆಗಿ 18 ವರ್ಷ ಪೂರೈಸಿದೆ. ಒಟ್ಟು 28 ಸಿನಿಮಾಗಳಲ್ಲಿ ಪುನೀತ್​ ನಟಿಸಿದ್ದಾರೆ. ಸದ್ಯ ಯುವರತ್ನ ಮತ್ತು ಜೇಮ್ಸ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಅಂದಿನ ಸಿನಿಮಾ ಬಿಡುಗಡೆಯ ಫೋಟೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts