More

    ವಿದ್ಯುತ್ ಅವಘಡಗಳನ್ನು ತಪ್ಪಿಸಲು ಎಸ್ಕಾಂಗಳಲ್ಲಿ ಜಾಗೃತಿ ಅಭಿಯಾನ

    ಬೆಂಗಳೂರು:
    ವಿದ್ಯುತ್ ಅವಘಡಗಳು ಹೆಚ್ಚುತ್ತಿರುವುದನ್ನು ತಪ್ಪಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಎಸ್ಕಾಂಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ವಿದ್ಯುತ್ ಅವಘಡಗಳ ಬಗ್ಗೆ ಹೇಗೆ ಮುನ್ನೆಚ್ಚರಿಕೆಯಾಗಿರಬೇಕು ಮತ್ತು ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಏನೇನು ಮಾಡಬೇಕು ಎಂಬಿತ್ಯಾಧಿ ಮಾಹಿತಿಗಳನ್ನು ಜಾಗೃತಿ ಅಭಿಯಾನದಲ್ಲಿ ತಿಳಿಸಲಾಗುತ್ತಿದೆ.
    ಕಳಪೆ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಐಎಸ್‌ಐ ಮಾರ್ಕ್ ಇರುವ ಉತ್ತಮ ಗುಣಮಟ್ಟದ ಪರಿಕರಗಳನ್ನು ಬಳಸಿ ವಿದ್ಯುತ್ ಅವಘಡಗಳನ್ನು ತಪ್ಪಿಸಿ ಎಂದು ಅಭಿಯಾನ ಮಾಡಲಾಗುತ್ತಿದೆ.
    ವಿಶೇಷವಾಗಿ ಪಾದಚಾರಿಗಳು ನಡೆದು ಹೋಗುವ ಪುಟ್‌ಪಾತ್ ಹಾದಿಯಲ್ಲಿ ವಿದ್ಯುತ್ ತಂತಿ, ಟ್ರಾನ್‌ಸ್ಾರ‌್ಮರ್‌ಗಳ ಬಗ್ಗೆಯೂ ಸದಾ ಎಚ್ಚರಿಕೆ ಇರಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
    ಜಾಗೃತಿ ಮೂಡಿಸುವ ೋಷ ವಾಕ್ಯಗಳ ಪ್ಲೇ ಕಾರ್ಡ್‌ಗಳನ್ನು ಹಿಡಿದು ಬೆಸ್ಕಾಂಗಳ ಸಿಬ್ಬಂದಿಗಳು ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
    ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡುವ ಸ್ಪರ್ಧೆ ಜೊತೆಗೆ ನಾನಾ ರೀತಿಯ ಚಟುವಟಿಕೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ.

    *ವಿದ್ಯುತ್ ಅವಘಡಗಳ ತಪ್ಪಿಸಲು ಮತ್ತು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ಕೆಲಸವನ್ನು ಆಂದೋಲನ ರೀತಿಯಲ್ಲಿ ಮಾಡಲಾಗುತ್ತಿದೆ.
    -ಮಹಾಂತೇಶ ಬೀಳಗಿ, ಎಂಡಿ, ಬೆಸ್ಕಾಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts