More

    ಪವರ್ ಬ್ಯಾಂಕ್ ಆ್ಯಪ್ ವಂಚನೆ ಪ್ರಕರಣ; ಕ್ರಿಪ್ಟೋ ಕರೆನ್ಸಿ ಸೇರಿ 2.77 ಕೋಟಿ ಜಪ್ತಿ ಮಾಡಿದ ಇಡಿ

    ಬೆಂಗಳೂರು: ಪವರ್ ಬ್ಯಾಂಕ್ ಆ್ಯಪ್ ವಂಚನೆ ಪ್ರಕರಣ ಸಂಬಂಧ ಆರೋಪಿಗಳಿಗೆ ಸೇರಿದ 2.77 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ.

    ಇದರಲ್ಲಿ 18.05 ಲಕ್ಷ ರೂ. ಕ್ರಿಪ್ಟೋ ಕರೆನ್ಸಿ ಮತ್ತು 4.17 ಲಕ್ಷ ರೂ. ಮೌಲ್ಯದ ಷೇರುಗಳು ಒಳಗೊಂಡಿವೆ.
    ಅಮಾಯಕರಿಂದ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಸಂಬಂಧ 2021ರ ಜೂನ್‌ನಲ್ಲಿ ಪವನ್ ಬ್ಯಾಂಕ್ ಆ್ಯಪ್‌ನ 13 ಆರೋಪಿಗಳ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

    ಗೇಮಿಂಗ್, ನೆಟ್‌ವರ್ಕಿಂಗ್ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಪ್ರತಿದಿನ ಮತ್ತು ವಾರಕ್ಕೆ ಶೇ.18 ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು. 2021ರ ಮಾರ್ಚ್‌ನಿಂದ ಮೇ ನಡುವೆ 3 ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಂದ 342 ಕೋಟಿ ರೂ. ಸಂಗ್ರಹಿಸಿದ್ದರು.

    ಹೂಡಿಕೆದಾರರಿಗೆ ಬಡ್ಡಿ ಕೊಟ್ಟಿರಲಿಲ್ಲ. ಅಸಲು ಸಹ ಕೊಡದೆ ಏಕಾಏಕಿ ತಮ್ಮ ವ್ಯವಹಾರವನ್ನು ಮುಚ್ಚಿ ಮೋಸ ಮಾಡಿದ್ದರು. ನೊಂದ ಜನರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡು ಆರೋಪಿ ಅನಾಸ್ ಅಹ್ಮದ್ ವಶಕ್ಕೆ ಪಡೆದು 40.64 ಕೋಟಿ ರೂ. ಜಪ್ತಿ ಮಾಡಿತ್ತು. ಆರೋಪಿಗಳ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿಕೊಂಡು ಇಡಿ ತನಿಖೆ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts