More

    ಸಾಧನೆಗೆ ಬಡತನ ಅಡ್ಡಿಯಾಗದು

    ಹೊರ್ತಿ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸುವ ಛಲ ಹೊಂದಿದ್ದರೆ ಬಡತನ-ಸಿರಿತನ ಅಡ್ಡಿಯಾಗದು ಎಂದು ಶ್ರೀಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ. ರಾಠೋಡ ಹೇಳಿದರು.

    ಹಲಸಂಗಿ ಗ್ರಾಮದ ಅರವಿಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು

    ಹಲವಾರು ಸಾಧಕರು ತಮ್ಮ ಜೀವನದಲ್ಲಿ ಬಡತನ, ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ತಮ್ಮ ಗುರಿ ಮುಟ್ಟುವತನಕ ಏಕಾಗ್ರತೆಯಿಂದ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೇರಿದ್ದಾರೆ. ಇಂದಿನ ವಿದ್ಯಾರ್ಥಿಗಳು ಮುಂದಿನ ದೇಶದ ಆದರ್ಶ ಪ್ರಜೆಗಳಾಗಲು ಉತ್ತಮ ಸಂಸ್ಕಾರ, ಆಚಾರ, ವಿಚಾರಗಳನ್ನು ಹೊಂದಿ, ದುಶ್ಚಟಗಳಿಂದ ದೂರವಿರಬೇಕು ಎಂದರು.

    ಉಪನ್ಯಾಸಕ ಸಿ.ಎ. ಬಗಲಿ ಮಾತನಾಡಿ, ಭವ್ಯ ಭಾರತ ನಿರ್ಮಾಣದ ಹೊಣೆ ಇಂದಿನ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು, ಶಾಲೆಗೂ, ಹೆತ್ತವರಿಗೂ ಹೆಸರು ತರಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಮನಮಿ ಮಾತನಾಡಿದರು. ಕಾರ್ಯದರ್ಶಿ ರಾಮಣ್ಣ ಮನಮಿ, ನಿರ್ದೇಶಕ ಚಂದ್ರಶೇಖರ ಖೇಡಗಿ, ಪ್ರಾಚಾರ್ಯ ಡಿ.ಬಿ. ತಿಕೋಟಿ, ಹಿರಿಯ ಶಿಕ್ಷಕ ಬಿ.ಬಿ. ಹೊನಮಾನೆ, ವಿ.ಡಿ. ಮನಮಿ, ಎ.ಎಸ್. ಲೋಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts