More

    ಅರ್ಹತೆಯ ಆಧಾರದಲ್ಲಿ ಹುದ್ದೆಗಳು ಹಂಚಿಕೆಯಾಗಬೇಕು

    ಮಡಿಕೇರಿ: ನೂತನ ರಾಜ್ಯ ಸರ್ಕಾರದ ಮಂತ್ರಿಮಂಡಲ ರಚನೆಯಾಗಿದೆ. ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಸಂವಿಧಾನದತ್ತವಾದ ಹುದ್ದೆಗಳು ಅರ್ಹತೆಯ ಆಧಾರದ ಮೇಲೆ ಹಂಚಿಕೆಯಾಗಬೇಕೆ ಹೊರತು ಜಾತಿ, ಧರ್ಮ, ಪಂಗಡಗಳ ಆಧಾರದಿಂದ ಅಲ್ಲವೆಂದು ವಕೀಲ ಕೆ.ಎಂ.ಕುಂಞಿ ಅಬ್ದುಲ್ಲ ಅಭಿಪ್ರಾಯಪಟ್ಟಿದ್ದಾರೆ.


    ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭ ಜಾತೀಯತೆಯ ವಿಚಾರ ಹೆಚ್ಚು ಚರ್ಚೆಗೆ ಬಂತು. ಇದೀಗ ಕೆಲವೊಂದು ಗುಂಪು, ಪಂಗಡ, ಜಾತಿಗಳು ಸಂವಿಧಾನ ದತ್ತವಾದ ಸ್ಥಾನಮಾನಗಳನ್ನು ಅರ್ಹತೆಯನ್ನಾಧರಿಸಿ ಸ್ವೀಕರಿಸದೆ ಜಾತಿ, ಧರ್ಮಗಳ ಆಧಾರದಲ್ಲಿ ಕೇಳಿ ಪಡೆಯುತ್ತಿರುವುದು ಮತ್ತು ಹಂಚಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲದೆ ಸಂವಿಧಾನ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ.


    ಯಾವುದೇ ವ್ಯಕ್ತಿ ತಮ್ಮ ಅರ್ಹತೆ ಮತ್ತು ಪ್ರತಿಭೆಯ ಮೂಲಕ ಸಂವಿಧಾನದತ್ತವಾದ ಹುದ್ದೆಗಳನ್ನು ಪಡೆದಾಗ ಮಾತ್ರ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಉಳಿದು ಸಂವಿಧಾನದ ಮೂಲ ಉದ್ದೇಶ ಈಡೇರುತ್ತದೆ ಎಂದು ಕುಂಞಿ ಅಬ್ದುಲ್ಲ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts