More

    2 ತಿಂಗಳ ಹಿಂದೆ ಮೃತಪಟ್ಟ ಶಿಶುವಿನ ಮರಣೋತ್ತರ ಪರೀಕ್ಷೆ ಈಗ!

    ವಿರಾಜಪೇಟೆ: ಎರಡು ತಿಂಗಳ ಹಿಂದೆ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸವ ವೇಳೆಯಲ್ಲಿ ಮೃತಪಟ್ಟಿದ್ದ ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಯಿತು.

    ಮಾ.18ರಂದು ಅಮ್ಮತ್ತಿಯ ಸಮೀನಾ ಎಂಬವರು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಮಯದಲ್ಲಿ ಮಗು ಮೃತಪಟ್ಟಿತ್ತು. ವೈದ್ಯರು, ಸ್ಕಾೃನಿಂಗ್ ತಜ್ಞರು ಹಾಗೂ ಶುಶ್ರೂಷಕಿಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಮಾ.20 ರಂದು ಸಮೀನಾ ಅವರ ಪತಿ ಫಯಾಝುಲ್ಲಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

    ಅಲ್ಲದೇ, ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪಾಲಕರು ಮಡಿಕೇರಿ ಉಪವಿಭಾಗಾಧಿಕಾರಿ ಟಿ.ಜವರೇಗೌಡರಿಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿ ವಿರಾಜಪೇಟೆ ತಹಸೀಲ್ದಾರ್ ಅವರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಉಪವಿಭಾಗಾಧಿಕಾರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ್ ನಂದೀಶ್ ಸಮ್ಮುಖದಲ್ಲಿ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

    ಮೇ 11ರಂದು ಠಾಣೆಯಲ್ಲಿ ದೂರು ದಾಖಲಾದ ನಂತರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಅವರು ಮಗು ಮೃತಪಟ್ಟ ಬಗ್ಗೆ ತನಿಖಾಧಿಕಾರಿಯಾಗಿ ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರನ್ನು ನೇಮಿಸಿ ತನಿಖೆ ನಡೆಸಿದ್ದರು.

    ಇದನ್ನೂ ಓದಿ ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭವಾಗುವುದು ಅನುಮಾನ

    ತನಿಖಾಧಿಕಾರಿಗಳು ವೈದ್ಯರು ಹಾಗೂ ಶುಶ್ರೂಷಕಿಯ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವುದಾಗಿ ವರದಿ ನೀಡಿದ್ದರು. ಹಾಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಹೆರಿಗೆ ವೈದ್ಯರಾದ ಡಾ.ರೇಣುಕಾ, ಸ್ಕಾೃನಿಂಗ್ ತಜ್ಞರು ಮತ್ತು ಶುಶ್ರೂಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಒಂದೇ ಒಂದು ಕಟ್ಟು ಕೊತ್ತಂಬರಿಯ ಬೆಲೆ 90 ರೂ.!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts