More

    ಅತ್ತ ವಿಎಫ್​ಎಕ್ಸ್​​ , ಇತ್ತ ಸಂಕಲನ; ಭರದಿಂದ ಸಾಗಿದೆ ‘ಯುಐ’ ಪೋಸ್ಟ್ ಪ್ರೊಡಕ್ಷನ್ ಕೆಲಸ

    ಬೆಂಗಳೂರು: ‘ಉಪ್ಪಿ 2’ ಚಿತ್ರ ಬಳಿಕ ಎಂಟು ವರ್ಷಗಳ ನಂತರ ಉಪೇಂದ್ರ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಯುಐ’. ವಿಭಿನ್ನ ಶೀರ್ಷಿಕೆ, ವಿಶೇಷ ಪೋಸ್ಟರ್‌ಗಳ ಮೂಲಕ ಪ್ರತಿ ಹಂತದಲ್ಲೂ ಕುತೂಹಲ ಮೂಡಿಸಿರುವ ಚಿತ್ರವಿದು. ಇದೀಗ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಸೋಮವಾರದಿಂದ (ಜು. 31) ಸಂಕಲನದ ಕೆಲಸಗಳಲ್ಲಿ ಬಿಜಿಯಾಗಿದೆ. ಸಂಕಲನದ ಜತೆ ಜತೆಗೆ ವಿಎ್ಎಕ್ಸ್ ಕೆಲಸಗಳೂ ಏಕ ಕಾಲದಲ್ಲಿ ನಡೆಯುತ್ತಿವೆ.

    ಅಪರೂಪದ ಕಥೆ
    ಉಪೇಂದ್ರ ನಿರ್ದೇಶನದ ಚಿತ್ರಗಳಲ್ಲಿ ಕಥೆ, ಚಿತ್ರಕಥೆ ಸೇರಿ ಪಾತ್ರಗಳ ಪೋಷಣೆ, ಕಥೆಯ ನಿರೂಪಣೆ ಎಲ್ಲ ವಿಷಯಗಳಲ್ಲೂ ವಿಶೇಷತೆಯಿರಲಿದೆ. ಅದೇ ರೀತಿ ‘ಯುಐ’ ಕೂಡ ಅಪರೂಪದ ಕಥಾಹಂದರ ಹೊಂದಿದ್ದು, ಜಾಗತಿಕ ಮಟ್ಟದ ಘಟನೆಗಳ ಸುತ್ತ ಹೆಣೆಯಲಾಗಿದೆ ಎನ್ನಲಾಗಿದೆ. ‘ಕೆಜಿಎ್’ ಖ್ಯಾತಿಯ ಕಲಾನಿರ್ದೇಶಕ ಶಿವಕುಮಾರ್ ‘ಯುಐ’ ಚಿತ್ರದ ಕಲಾನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಚಿತ್ರೀಕರಣದ ಸಮಯದಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಹಳ್ಳಿಯ ವಾತವಾರಣ ಸೃಷ್ಟಿಸಿದ್ದರು ಎನ್ನಲಾಗಿದೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆಪಿ ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದು, ಇದೇ ಡಿಸೆಂಬರ್‌ನಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಇದನ್ನೂ ಓದಿ: ಗ್ರಾಮೀಣ ಭಾಗಕ್ಕೆ ಮೂಲಸೌಲಭ್ಯ ಕಲ್ಪಿಸಿ

    ಅತ್ಯಾಧುನಿಕ ತಂತ್ರಜ್ಞಾನ
    ‘ಯುಐ’ ತಾಂತ್ರಿಕವಾಗಿಯೂ ವಿಶೇಷತೆಗಳಿಂದ ಕೂಡಿರಲಿದೆ. ಅಮೆರಿಕದ ವ್ಯಾಂಕೋವರ್ ಫಿಲಂ ಸ್ಕೂಲ್‌ನಲ್ಲಿ ವಿಎಫ್​ಎಕ್ಸ್​​ ಕಲಿತಿರುವ ನುರಿತ ತಂತ್ರಜ್ಞರಾದ ನಿರ್ಮಲ್ ಕುಮಾರ್ ಹಾಗೂ ನವೀನ್ ಮನೋಹರ್ ಚಿತ್ರದ ವಿಎಫ್​ಎಕ್ಸ್​​ ಜವಾಬ್ದಾರಿ ಹೊತ್ತಿದ್ದು, ಅಮೆರಿಕದ ರೇಡಿಯನ್ಸ್ ವಿಎಫ್​ಎಕ್ಸ್​​ ಮತ್ತು ಯೂನಿೈ ಮೀಡಿಯಾ ಜಂಟಿಯಾಗಿ ವಿಎ್ಎಕ್ಸ್ ಕೆಲಸಗಳನ್ನು ಮಾಡುತ್ತಿದ್ದಾರೆ. ಜತೆಗೆ ವಿಆರ್ ಮೊಕೊಬಾಟ್, ಥ್ರೀಡಿ ಸ್ಕಾೃನಿಂಗ್, ವರ್ಚುವಲ್ ಪೈಪ್‌ಲೈನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಅಲ್ಲದೆ, 1,400ಕ್ಕೂ ಅಧಿಕ ವಿಎಫ್​ಎಕ್ಸ್​​ ಶಾಟ್‌ಗಳು ಚಿತ್ರದಲ್ಲಿ ಕಾಣಬಹುದು ಎನ್ನಲಾಗಿದೆ.

    ಅತ್ತ ವಿಎಫ್​ಎಕ್ಸ್​​ , ಇತ್ತ ಸಂಕಲನ; ಭರದಿಂದ ಸಾಗಿದೆ ‘ಯುಐ’ ಪೋಸ್ಟ್ ಪ್ರೊಡಕ್ಷನ್ ಕೆಲಸ
    ಅತ್ತ ವಿಎಫ್​ಎಕ್ಸ್​​ , ಇತ್ತ ಸಂಕಲನ; ಭರದಿಂದ ಸಾಗಿದೆ ‘ಯುಐ’ ಪೋಸ್ಟ್ ಪ್ರೊಡಕ್ಷನ್ ಕೆಲಸ

    ಕೆಪಿ ಶ್ರೀಕಾಂತ್, ನಿರ್ಮಾಪಕ:
    ‘ಯುಐ’ ಉಪೇಂದ್ರ ಅವರ ಶೈಲಿಯ ಸಿನಿಮಾ. ಸದ್ಯ ಸಂಕಲನ ಹಾಗೂ ವಿಎಫ್​ಎಕ್ಸ್​ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿವೆ. ಅಮೆರಿಕದ ನುರಿತ ತಂತ್ರಜ್ಞರು ವಿಎಫ್​ಎಕ್ಸ್​​ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts