More

    ಲಾಕ್​ಡೌನ್​ ತೆರವಾದ ಬಳಿಕ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುವ ಆತಂಕ, ಇದಕ್ಕೆ ಕಾರಣ ಏನು ಗೊತ್ತಾ?

    ನವದೆಹಲಿ: ಸದ್ಯ ದೇಶಾದ್ಯಂತ ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದೆ. ಆದರೂ ಲಾಕ್​ಡೌನ್​ ತೆರವಾದ ಬಳಿಕ ದೇಶದಲ್ಲಿ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆಗಳು ಆರಂಭವಾಗಿವೆ. ಅದರಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಾ? ಅಥವಾ ಕಡಿಮೆಯಾಗುತ್ತಾ ಎಂಬುದು ಚರ್ಚೆಯ ಪ್ರಮುಖ ವಿಷಯವಾಗಿದೆ.

    ಒಂದು ಮೂಲದ ಪ್ರಕಾರ, ಲಾಕ್​ಡೌನ್​ ತೆರವಾದ ನಂತರದಲ್ಲಿ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಸರಕು ಸಾಗಣೆ ವೆಚ್ಚ ಹೆಚ್ಚಾಗುವುದರಿಂದ, ಅಗತ್ಯವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.

    ಬೇಡಿಕೆಗೆ ತಕ್ಕಂತೆ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ, ಕಾರ್ಮಿಕರ ಕೊರತೆ, ಸರ್ಕಾರಿ ನಿಯಂತ್ರಣದ ಸಮಸ್ಯೆಗಳನ್ನು ನಿರ್ವಹಿಯಲು ಸರಕು ಸಾಗಣೆ ಸಂಸ್ಥೆಗಳು ಸರ್​ಚಾರ್ಜ್​ ವಿಧಿಸಲಿದ್ದಾರೆ. ಜತೆಗೆ ಹಾಲಿ ಇರುವ ಸಾಗಣೆ ದರಗಳನ್ನು ಶೇ.80 ಹೆಚ್ಚಿಸುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

    ಲಾಕ್​ಡೌನ್​ ತೆರವಿನ ಬಳಿಕ 8 ತಾಸು ಬದಲು 12 ತಾಸು ಕೆಲಸ ಮಾಡಲು ಸಿದ್ಧರಾಗಿ, ಸುಗ್ರೀವಾಜ್ಞೆ ತರಲಿದೆ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts