More

    ಕಾಂಗ್ರೆಸ್ ನಗರ ಸಮಿತಿಯಿಂದ ಪೋಸ್ಟ್ ಕಾರ್ಡ್ ಚಳವಳಿ

    ಮೈಸೂರು: ರೈಲ್ವೆ ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್ ನಗರ ಸಮಿತಿಯಿಂದ ಶನಿವಾರ ನಗರಪಾಲಿಕೆ ಮುಂಭಾಗದ ಪೋಸ್ಟ್‌ಬಾಕ್ಸ್ ಬಳಿ ಪೋಸ್ಟ್ ಕಾರ್ಡ್ ಚಳವಳಿ ನಡೆಯಿತು.

    ರೈಲ್ವೆ ಇಲಾಖೆಗೆ 165 ವರ್ಷಗಳ ಸುದೀರ್ಘ ಇತಿಹಾಸವಿದೆ. ರೈಲ್ವೆ ಇಲಾಖೆಯು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ಜನರಿಗೆ ಉತ್ತಮ ಸೇವೆ ನೀಡುತ್ತಿವೆ. ಹೀಗಿರುವಾಗ ಕೇಂದ್ರ ಸರ್ಕಾರ ದೇಶದಲ್ಲಿನ 109 ರೈಲ್ವೆ ನಿಲ್ದಾಣಗಳು, 151 ರೈಲುಗಳನ್ನು ಖಾಸಗಿಗೆ ವಹಿಸಲು ಹೊರಟಿರುವುದು ಖಂಡನೀಯ. ಇದರಿಂದ ದೇಶದ ಆರ್ಥಿಕತೆ ಹಾಗೂ ಕೃಷಿ-ಕೈಗಾರಿಕೆಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಖಾಸಗೀಕರಣವನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಪೋಸ್ಟ್ ಕಾರ್ಡ್ ಪೋಸ್ಟ್ ಮಾಡಲಾಯಿತು.

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಅಯೂಬ್ ಖಾನ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts