More

    ಎಸ್ಟೇಟ್​ನಲ್ಲಿ ಖಾಂಡ್ಯ ರಸ್ತೆ ಸಂಚಾರಕ್ಕೆ ಅಡ್ಡಿ, ಸಂಕಷ್ಟದಲ್ಲಿ 20 ಕುಟುಂಬಗಳು

    ಕಳಸ: ಕಳಸ ಹೋಬಳಿ ಮರಸಣಿಗೆ ಗ್ರಾಪಂ ಚಹಾ ತೋಟದಲ್ಲಿ ಖಾಂಡ್ಯ ಗಿರಿಜನರ ಮನೆಗಳಿಗೆ ಹೋಗುವ ರಸ್ತೆಗಳಿಗೆ ಗೇಟ್ ಗಳನ್ನು ಅಳವಡಿಸಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ತೀರಾ ಹತ್ತಿರವಾಗಿದ್ದ ಒಂದೇ ದಾರಿ ಈಗ ಮುಚ್ಚಿರುವುದರಿಂದ 11 ಕಿಮೀ ಸುತ್ತಿ ಬಳಸಿ ಗ್ರಾಮ ತಲುಪುವ ಸ್ಥಿತಿ ಒದಗಿದೆ.

    ಖಾಂಡ್ಯ ಗ್ರಾಮದಲ್ಲಿ 20 ಕುಟುಂಬಗಳಿವೆ. ಎಲ್ಲರೂ ಗಿರಿಜನ ಕುಟುಂಬಕ್ಕೆ ಸೇರಿದವರು. ಈ ಕುಟುಂಬಗಳು ಅನಾದಿ ಕಾಲದಿಂದಲೂ ಖಾಂಡ್ಯ ಪ್ರದೇಶದಲ್ಲಿ ಜಮೀನು ಮಾಡಿಕೊಂಡು ಜೀವನ ನಡೆಸುತ್ತಿವೆ. ಗ್ರಾಮಕ್ಕೆ ಸರ್ಕಾರ ಅನುದಾನ ನೀಡಿ ರಸ್ತೆ, ನೀರು, ವಸತಿ ಸೌಲಭ್ಯವನ್ನೂ ಕಲ್ಪಿಸಿದೆ. ಆದರೆ ಕುಟುಂಬಗಳು ಚಹಾ ತೋಟದ ಮಧ್ಯದ ಎರಡೂವರೆ ಕಿಮೀ ದೂರದ ರಸ್ತೆಯನ್ನೇ ಅವಲಂಬಿಸಿವೆ. ಹಿಂದಿನಿಂದಲೂ ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಆಂಬುಲೆನ್ಸ್​ಗಳು, ವಾಹನಗಳು ಸಂಚರಿಸುತ್ತಿದ್ದು, ದಿನ ನಿತ್ಯದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಸ್ಟೇಟ್​ನವರು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿರಲಿಲ್ಲ. ಆದರೆ ಐದು ತಿಂಗಳ ಹಿಂದೆ ಕರೊನಾದ ಕಾರಣ ನೀಡಿ ಖಾಂಡ್ಯದ ರಸ್ತೆಗೆ ಗೇಟ್ ಅಳವಡಿಸಿದರು. ಇದಕ್ಕೆ ಗ್ರಾಮಸ್ಥರು ಸಹಮತ ನೀಡಿದ್ದರು. ಆದರೆ ಸದ್ಯ ಒಂದೇ ರಸ್ತೆಗೆ ಆರು ಕಡೆ ಗೇಟ್​ಗಳನ್ನು ನಿರ್ವಿುಸಿ ಗ್ರಾಮಕ್ಕೆ ವಾಹನಗಳನ್ನು ಹೋಗಲು ಬಿಡುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts