More

    ಮಿಠಾಯಿ ಮಾರುವವನ ಮಗಳಿಗೆ ಉತ್ತಮ ಅಂಕ

    ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

    ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಬಾಂಬೆ ಮಿಠಾಯಿ ಮಾರಾಟ ಮಾಡುತ್ತಿದ್ದವನ ಪುತ್ರಿ ಪಿಯು ಪರೀಕ್ಷೆಯಲ್ಲಿ ಶೇ. 94.05ರಷ್ಟು ಅಂಕಗಳಿಸಿದ್ದು, ಶ್ಲಾಘನೆಗೆ ಪಾತ್ರಳಾಗಿದ್ದಾಳೆ.

    ಪಟ್ಟಣದ ಮಾರುತಿ ನಗರದ ಗುಡಿಸಲಿನಲ್ಲಿ ವಾಸವಾ ಗಿರುವ ಲಕ್ಷ್ಮಿ ಗುಜಲೂರ, ಕನ್ನಡ-97, ಇಂಗ್ಲಿಷ್-80, ಭೌತಶಾಸ್ತ್ರ-97, ರಸಾಯನಶಾಸ್ತ್ರ-98, ಗಣಿತ-98, ಜೀವಶಾಸ್ತ್ರ-97 ಸೇರಿ ಶೇ. 94.05ರಷ್ಟು ಅಂಕಗಳಿಸಿದ್ದು, ಬಡತನದಲ್ಲೂ ಉತ್ತಮ ಸಾಧನೆಗೈದಿದ್ದಾಳೆ.

    ತಂದೆ ನಾಗಪ್ಪ ಗ್ರಾಮೀಣ ಭಾಗದಲ್ಲಿ ತಿರುಗಾಡಿ ಬಾಂಬೆ ಮಿಠಾಯಿ ಮಾರಾಟ ಮಾಡುತ್ತ ಮಗಳನ್ನು ಓದಿಸಿದ್ದಾನೆ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಲಕ್ಷ್ಮಿಯೇ ಮೊದಲನೆಯವಳು. ಲಕ್ಷ್ಮಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿಯೂ ಶೇ. 95.04 ಅಂಕಗಳಿಸಿದ್ದಳು. ನಂತರ ಧಾರವಾಡದ ಸೃಷ್ಟಿ ಪಿಯು ಕಾಲೇಜ್​ಗೆ ಸೇರಿಕೊಂಡಿದ್ದಳು.

    ಇದೀಗ ಪಿಯುಸಿಯಲ್ಲೂ ಉತ್ತಮ ಅಂಕಗಳಿಸಿದ್ದು, ಮುಂದೆ ಎಂಬಿಬಿಎಸ್ ಓದುವ ಕನಸು ಕಂಡಿದ್ದಾಳೆ. ಆದರೆ, ಗುಡಿಸಲಿನಲ್ಲಿ ಇದ್ದು ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿರುವ ಅವರ ಕುಟುಂಬದವರಿಗೆ ಲಕ್ಷ್ಮಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಯಾರಾದರೂ ಧನ ಸಹಾಯ ಮಾಡಿದರೆ, ನನ್ನ ಓದಿಗೆ ಅನುಕೂಲವಾಗುತ್ತದೆ ಎಂಬುದು ಲಕ್ಷ್ಮಿಯ ಮನವಿ.

    ಅವಳ ಕಲಿಕಗೆ ಸಹಾಯ ಮಾಡುವವರು ಅವಳ ಅಕೌಂಟ್ ನಂಬರ್​ಗೆ ಹಣ ಸಂದಾಯ ಮಾಡಬಹುದು. (ಕೆವಿಜಿ ಬ್ಯಾಂಕ್ ಖಾತೆ ಸಂಖ್ಯೆ-8906617828-2, ಐಎಫ್​ಎಸ್​ಸಿ ಕೋಡ್ ಕೆವಿಜಿಬಿ-0007605, ಸಂಪರ್ಕ ಮೊಬೈಲ್ ಸಂಖ್ಯೆ: 9591175787)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts