More

    ವಿಷ ಪರಿಹಾರೇಶ್ವರ ನಾಗರಮೂರ್ತಿಗೆ ಪೂಜೆ

    ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ವಿಷ ಪರಿಹಾರೇಶ್ವರ ಕಟ್ಟೆಯ ನಾಗರಮೂರ್ತಿಗೆ ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸೋಮವಾರ ವಿಶೇಷ ಕ್ಷೀರಾಭಿಷೇಕ, ಹರಳಿನ ಕಲ್ಲುಗಳ ಪೂಜೆ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ಜರುಗಿದವು.

    ನಾಗರ ಮೂರ್ತಿಗೆ 108 ಮಂತ್ರಗಳ ಪಠಣ ಮೂಲಕ ಕ್ಷೀರಾಭಿಷೇಕ ನಡೆಯಿತು. ಹರಳಿನ ಕಲ್ಲುಗಳನ್ನು ನಾಗರಮೂರ್ತಿಯ ಸನ್ನಿಧಿಯಲ್ಲಿ ಇಟ್ಟು 108 ಮಂತ್ರ ಪಠಣ ಮಾಡಿ ಭಕ್ತರಿಗೆ ವಿತರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಪೂಜಿಸಿದ ಕಲ್ಲುಗಳನ್ನು ಕೊಂಡೊಯ್ದರು. ಅರ್ಚಕರಾದ ಈರಯ್ಯ ಆರಾಧ್ಯಮಠ ಮತ್ತು ಗಣೇಶ ಅಂಗಡಿ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

    ಕಮಿಟಿ ಅಧ್ಯಕ್ಷ ಬಾಣಪ್ಪ ಸಿದ್ದಗೇರಿ, ಗಣೇಶ ಬಣಕಾರ, ಪರಮೇಶ ಹುಲ್ಮನಿ, ದೊಡ್ಡವೀರಪ್ಪ ಹುಲ್ಮನಿ, ಡಿ.ಬಿ. ಪಾಟೀಲ, ಮಾಲತೇಶ ಗಂಗೋಳ, ಹನುಮಂತಗೌಡ ಭರಮಣ್ಣನವರ, ಶಿವಪ್ಪ ಬಸನಾಳ, ಚಮನಸಾಬ ದೊಡ್ಡಮನಿ ಸೇರಿದಂತೆ ಮಕರಿ ಗ್ರಾಮಸ್ಥರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

    ವಿಷಜಂತುಗಳ ಕಾಟ ನಿವಾರಣೆ ನಂಬಿಕೆ

    ವಿಷ ಪರಿಹಾರೇಶ್ವರ ಕಟ್ಟೆಯ ನಾಗರಮೂರ್ತಿ ಸನ್ನಿಧಿಯಲ್ಲಿ ಪೂಜಿಸಿದ ಕಲ್ಲುಗಳನ್ನು ಜಮೀನಿನಲ್ಲಿ ಹಾಗೂ ಮನೆಯ ಬಳಿ ಕಟ್ಟುವುದರಿಂದ ಯಾವುದೇ ವಿಷಜಂತುಗಳ ಕಾಣಿಸಿಕೊಳ್ಳುವುದಿಲ್ಲ. ಯಾವುದೇ ವ್ಯಕ್ತಿಗೆ ವಿಷಜಂತುಗಳು ಕಚ್ಚಿದಾಗ ಈ ಕಲ್ಲುಗಳನ್ನು ಅವರ ಕೈಗಳಿಗೆ ಕಟ್ಟುವುದರಿಂದ ಅವರಿಗೆ ತೊಂದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೀಪಾವಳಿ ಅಮಾವಾಸ್ಯೆ ಮಾತ್ರವಲ್ಲದೇ ಉಳಿದ ದಿನಗಳಲ್ಲಿಯೂ ಭಾನುವಾರ ಮತ್ತು ಗುರುವಾರ ಭಕ್ತರು ಆಗಮಿಸಿ, ಪೂಜಾ ಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts