More

    15 ನಿಮಿಷ ಅಳ್ತಾರಂತೆ ಪೂಜಾ … ಯಾಕೆ ಗೊತ್ತಾ?

    ಮುಂಬೈ: ನಟ-ನಟಿಯರು ತಮ್ಮ ಚಿತ್ರ ಸೋತಾಗ ಗೋಳಾಡುವುದು, ಬೇಸರದಿಂದ ಡಿಪ್ರೆಶನ್‌ಗೆ ಒಳಗಾಗುವುದು ಇವೆಲ್ಲ ಸಹಜವೇ. ಆದರೆ, ಪ್ಯಾನ್ ಇಂಡಿಯಾ ನಟಿ ಪೂಜಾ ಹೆಗ್ಡೆ ಮಾತ್ರ ಸೋತಾಗ ಬರೀ 15 ನಿಮಿಷ ಮಾತ್ರ ಅಳುತ್ತಾರಂತೆ. ಇದೇನು ವಿಚಿತ್ರ ಅಂತನಿಸಬಹುದು. ಆದರೆ, ಅದು ನಿಜ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಗ್​ಬಾಸ್​ ವಿನ್ನರ್​ ಲ್ಯಾಗ್​ ಮಂಜುಗಿಂತಲೂ ಅರವಿಂದ್​ಗೆ ಸಿಕ್ಕಿದೆ ಭಾರೀ ಮೊತ್ತದ ಹಣ? ಹೀಗೊಂದು ಲೆಕ್ಕಾಚಾರ..!

    ‘ನನ್ನ ಮೊದಲ ಚಿತ್ರ ‘ಮೊಹೆಂಜೊ ದಾರೋ’ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಆ ಚಿತ್ರಕ್ಕಾಗಿ ತುಂಬಾ ಶ್ರಮ ಹಾಕಿದ್ದೆ. ದೊಡ್ಡ ನಟ, ನಿರ್ದೇಶಕರು, ಬಜೆಟ್ ಎಲ್ಲವೂ ಇತ್ತು. ಆದರೂ ಚಿತ್ರ ಸೋತು ಹೋಯಿತು. ನನ್ನ ತನು-ಮನವನ್ನು ಸಂಪೂರ್ಣವಾಗಿ ಅರ್ಪಿಸಿದ ಚಿತ್ರ ಸೋತು ಹೋದಾಗ ಸಹಜವಾಗಿಯೇ ನೊಂದು ಹೋಗಿದ್ದೆ. ಈ ನೋವಿನಿಂದ ಹೊರಬರುವುದಕ್ಕೆ ಬಹಳ ಸಮಯ ಬೇಕಾಯಿತು. ಆದರೆ, ಈಗ ಹಾಗಿಲ್ಲ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿತಿದ್ದೇನೆ’ ಎನ್ನುತ್ತಾರೆ ಪೂಜಾ ಹೆಗ್ಡೆ.

    ಇದನ್ನೂ ಓದಿ: ಅಭಿಮಾನಿಗಳ ಪ್ರಾರ್ಥನೆ ನೆರವೇರಿಲಿಲ್ಲ: ಸ್ಫೂರ್ತಿಯ ಚಿಲುಮೆಯಾಗಿದ್ದ ಯುವ ನಟಿ ಶರಣ್ಯಾ ಸಾವು

    ಈಗ ಪೂಜಾ ಅಭಿನಯದ ಒಂದು ಚಿತ್ರ ಸೋತರೆ ಬಹಳ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ ‘ಸೋಲು ಮರೆಯುವುದಕ್ಕೆ 15 ನಿಮಿಷ ನನಗಾಗಿ ಇಟ್ಟುಕೊಳ್ಳುತ್ತೇನೆ. ಆ ಸಮಯದಲ್ಲಿ ಅಳುತ್ತೇನೆ, ಕೂಗಾಡುತ್ತೇನೆ, ನನ್ನ ಬೇಸರವನ್ನು ಹೊರಹಾಕಿ ಸುಮ್ಮನಾಗುತ್ತೇನೆ. ಆ ನಂತರ ಚಿತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನು ಅಲ್ಲಿಗೇ ಬಿಟ್ಟು, ಮುಂದಕ್ಕೆ ಹೋಗುತ್ತೇನೆ’ ಎನ್ನುತ್ತಾರೆ ಪೂಜಾ.

    ‘ಲವ್​ ಯೂ ರಚ್ಚು’ ಸಿನಿಮಾ ನಿರ್ದೇಶಕ ಸೇರಿ ಮೂವರಿಗೆ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts